

ಕನಕಗಿರಿ: ಸಿಡಿಲಿನಿಂದ ಶಿಥಿಲಗೊಂಡಿರುವ ತಾಲೂಕಿನ ನವಲಿ ತಾಂಡಾದ ದುರ್ಗಾದೇವಿ ದೇವಸ್ಥಾನದ ಗೋಪುರವನ್ನು ತಹಸೀಲ್ದಾರ್ ವಿಶ್ವನಾಥ ಮುರುಡಿ ಭಾನುವಾರ ಪರಿಶೀಲಿಸಿದರು. ಶನಿವಾರ ಸಂಜೆ ಸಿಡಿಲಿಗೆ ದೇವಸ್ಥಾನದ ಗೋಪುರ ಮೇಲ್ಭಾಗ ಸಂಪೂರ್ಣ ಶಿಥಿಲಗೊಂಡಿತ್ತು. ಉಳಿದ ಭಾಗ ಬಿರುಕುಗೊಂಡಿತ್ತು.
ಜಿಪಂ ಇಂಜಿನಿಯರ್ ಎಇಇ ವಿಜಯಕುಮಾರ್ ವರದಿಯನ್ನು ಮೇಲಧಿಕಾರಿಗಳಿಗೆ ಸಲ್ಲಿಸಲಾಗುವುದು. ಗೋಪುರ ಮರು ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುತ್ತದೆ. ಅದೃಷ್ಟವಶಾತ್ ಘಟನೆಯಿಂದ ಯಾವುದೇ ಪ್ರಾಣ ಹಾನಿಯಾಗಿಲ್ಲ ಎಂದು ತಹಸೀಲ್ದಾರ್ ವಿಶ್ವನಾಥ ಮುರುಡಿ ತಿಳಿಸಿದರು.
ಪಿಡಿಒ ವೀರಣ್ಣ ನಕ್ರಳ್ಳಿ, ಕಂದಾಯ ನಿರೀಕ್ಷಕ ಬಸ್ರುದ್ದೀನ್, ಗ್ರಾಮ ಲೆಕ್ಕಾಧಿಕಾರಿ ಮೆಹಬೂಬ್ ಇತರರಿದ್ದರು.