ಸಕಾಲಕ್ಕೆ ಬಸ್ ಬಿಡಲು ಒತ್ತಾಯ: ಕನಕಗಿರಿ ನಿಲ್ದಾಣದಲ್ಲಿ ಗ್ರಾಮೀಣ ವಿದ್ಯಾರ್ಥಿಗಳ ಪ್ರತಿಭಟನೆ

151222 Kanakagiri Students Protest for Bus
ಕನಕಗಿರಿ ಬಸ್ ನಿಲ್ದಾಣದಲ್ಲಿ ಬುಧವಾರ ಸಂಜೆ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ದಿಢೀರ್ ಪ್ರತಿಭಟನೆ ನಡೆಸಿದರು.
Published on

ಕನಕಗಿರಿ: ಶಾಲಾ-ಕಾಲೇಜು ಮುಗಿದ ಬಳಿಕ ಗ್ರಾಮಗಳಿಗೆ ತೆರಳಲು ಸಮಯಕ್ಕೆ ಸರಿಯಾಗಿ ಬಸ್ ಇಲ್ಲವಾಗಿದ್ದರಿಂದ ವಿದ್ಯಾರ್ಥಿಗಳು ಪಟ್ಟಣದ ಬಸ್ ನಿಲ್ದಾಣದಲ್ಲಿ ಬುಧವಾರ ಸಂಜೆ ದಿಢೀರ್ ಪ್ರತಿಭಟನೆ ನೆಡೆಸಿದರು.

ತಾಲೂಕು ವ್ಯಾಪ್ತಿಯ ವಡಕಿ, ಆಕಳಕುಂಪಿ, ಮಲ್ಲಿಗೆವಾಡ, ಕೆ.ಕಾಟಾಪುರ, ನವಲಿ ಗ್ರಾಮಗಳಿಂದ ಪಟ್ಟಣದ ಶಾಲಾ ಕಾಲೇಜಿಗೆ ಬರುತ್ತೇವೆ. ಆದರೆ, ಪಟ್ಟಣಕ್ಕೆ ಬರುವಾಗ ಹಾಗೂ ಸಂಜೆ ತೆರಳುವಾಗ ಸಕಾಲಕ್ಕೆ ಬಸ್ ವ್ಯವಸ್ಥೆ ಇಲ್ಲ. ಈ ಬಗ್ಗೆ ಹಲವು ಬಾರಿ ಸಂಚಾರಿ ನಿಯಂತ್ರಕರ ಗಮನಕ್ಕೆ ತಂದರೂ ಸ್ಪಂದಿಸುತ್ತಿಲ್ಲ ಎಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿದಿನ ಸಂಜೆ ಬಸ್‌ಗಳು ತಡವಾಗಿ ಬರುತ್ತಿರುವುದರಿಂದ ಮನೆಗೆ ಕತ್ತಲಾದ ನಂತರ ತಲುಪುವಂತಾಗಿದೆ. ಇದರಿಂದ ಮನೆಯಲ್ಲಿ ನಮ್ಮನ್ನು ಶಾಲಾ-ಕಾಲೇಜಿಗೆ ಹೋಗುವುದು ಬೇಡ ಎನ್ನುತ್ತಿದ್ದಾರೆ ಎಂದು ವಿದ್ಯಾರ್ಥಿನಿಯರಾದ ಲಕ್ಷ್ಮೀ , ಯಮನಮ್ಮ ಅಳಲು ತೋಡಿಕೊಂಡರು. ಕಾರಟಗಿ ಬಸ್ ದುರಸ್ತಿಯಿಂದಾಗಿ ಸಮಸ್ಯೆಯಾಗಿದೆ. ಇನ್ಮುಂದೆ ಹೀಗಾಗದಂತೆ ನೋಡಿಕೊಳ್ಳುವುದಾಗಿ ನಿಯಂತ್ರಕ ಶ್ರೀರಾಮ್ ನಾಯಕ ಭರವಸೆ ನೀಡಿದ ಮೇಲೆ ವಿದ್ಯಾರ್ಥಿಗಳು ಪ್ರತಿಭಟನೆ ವಾಪಸ್ ಪಡೆದರು. ವಿದ್ಯಾರ್ಥಿಗಳಾದ ದೇವರಾಜ, ಧ್ರುವ, ಶರಣಬಸವ, ಚರಣ, ಕಾರ್ತಿಕಗೌಡ, ಪವನ, ಸೋಮರಾಜ, ಆಂಜನೇಯ, ಪರಶುರಾಮ, ಜಯಶ್ರೀ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net