

ಕನಕಗಿರಿ: ರಾಜ್ಯದಲ್ಲಿ ಮತ್ತೆ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಬೂತ್ ಮಟ್ಟದ ಕಾರ್ಯಕರ್ತರು, ಪ್ರಮುಖರು ಸಿದ್ಧರಾಗಬೇಕು ಎಂದು ಶಾಸಕ ಬಸವರಾಜ ದಢೇಸುಗೂರು ಹೇಳಿದರು.
ಪಟ್ಟಣದ 13ನೇ ವಾರ್ಡ್‌ನಲ್ಲಿ ಬೂತ್ ವಿಜಯ ಅಭಿಯಾನಕ್ಕೆ ಸೋಮವಾರ ಚಾಲನೆ ನೀಡಿ ಮಾತನಾಡಿದರು. ನಾಲ್ಕು ತಿಂಗಳಲ್ಲಿ ರಾಜ್ಯದ ವಿಧಾನಸಭೆಗೆ ಸಾರ್ವತ್ರಿಕ ಚುನಾವಣೆ ನಡೆಯಲಿದ್ದು, ಪಕ್ಷವನ್ನು ಮತ್ತೊಮ್ಮೆ ಅಧಿಕಾರಕ್ಕೆ ತರಬೇಕಿದೆ. ಈ ನಿಟ್ಟಿನಲಿ ಪಕ್ಷ ಸಂಘಟನೆಗೆ ಪ್ರತಿಯೊಬ್ಬರೂ ಮುಂದಾಗಬೇಕು. ಪ್ರತಿ ಬೂತ್‌ನಲ್ಲಿ ಕಾರ್ಯಕರ್ತರ ಮನೆ ಮೇಲೆ ಬಿಜೆಪಿ ಧ್ವಜ ಕಟ್ಟುವ ಮೂಲಕ ಚುನಾವಣೆಗೆ ಅಣಿಯಾಗಬೇಕು ಎಂದರು. ಪಕ್ಷದ ಪ್ರಭಾರ ನರಸಿಂಗ್‌ರಾವ್ ಕುಲಕರ್ಣಿ ಮಾತನಾಡಿ, ಜ.2ರಿಂದ 12ರವರೆಗೆ ನಡೆಯುವ ಅಭಿಯಾನದಲ್ಲಿ ಕನಿಷ್ಠ 50 ಲಕ್ಷಕ್ಕೂ ಅಧಿಕ ಬಿಜೆಪಿ ಧ್ವಜಗಳು ರಾಜ್ಯದಲ್ಲಿ ಪಕ್ಷದ ಕಚೇರಿ ಹಾಗೂ ಕಾರ್ಯಕರ್ತರ ಮನೆಯ ಮೇಲೆ ಹಾರಡಲಿವೆ ಎಂದರು.
ಪಪಂ ಸದಸ್ಯರಾದ ಸುರೇಶಪ್ಪ ಗುಗ್ಗಳಶೆಟ್ಟಿ, ಹನುಮಂತ ಬಸರಿಗಿಡದ, ಶೇಷಪ್ಪ ಪೂಜಾರ, ನಂದಿನಿ ಓಣಿಮನಿ, ಬಿಜೆಪಿ ಮಂಡಲ ಅಧ್ಯಕ್ಷ ಮಹಾಂತೇಶ ಸಜ್ಜನ, ಪ್ರ. ಕಾರ್ಯದರ್ಶಿಗಳಾದ ವಾಗೀಶ್ ಹಿರೇಮಠ, ಗ್ಯಾನಪ್ಪ ಗಾಣದಾಳ, ಜಿಲ್ಲಾ ಎಸ್ಸಿ ಮೋರ್ಚಾ ಅಧ್ಯಕ್ಷ ಸಣ್ಣಕನಕಪ್ಪ, ಜಿಲ್ಲಾ ಯುವ ಮೋರ್ಚಾ ಪ್ರ.ಕಾರ್ಯದರ್ಶಿ ಶಿವು ಅರಕೇರಿ, ಮುಖಂಡರಾದ ಡಾ.ಡಿ ಎಂ.ಅರವಟಗಿಮಠ, ಬಸವರಾಜಪ್ಪ ಗುಗ್ಗಳಶೆಟ್ಟಿ, ಪ್ರಕಾಶ ಹಾದಿಮನಿ, ನಾಗಪ್ಪ ಜನಾದ್ರಿ, ಶರಣಪ್ಪ ಭಾವಿಕಟ್ಟಿ, ಅಶ್ವಿನಿ ಟಿ.ದೇಸಾಯಿ, ಸುಭದ್ರಮ್ಮ, ಶಿವಪ್ಪ ಕಲ್ಮನಿ, ಶಿವಾನಂದ ವಂಕಲಕುಂಟ, ನಿಂಗಪ್ಪ ನಾಯಕ, ಹರೀಶ ಪೂಜಾರ್ ಇತರರಿದ್ದರು.