ಬಿಜೆಪಿ ವಿಶ್ವದ ಅತ್ಯಂತ ದೊಡ್ಡ ಪಕ್ಷ

ಕನಕಗಿರಿ 13ನೇ ವಾರ್ಡ್‌ನ ಪಪಂ ಸದಸ್ಯ ಸುರೇಶ ಗುಗ್ಗಳಶೆಟ್ರ ಅವರ ಮನೆಯ ಮೇಲೆ ಬಿಜೆಪಿ ಧ್ವಜ ಹಾರಿಸಲಾಯಿತು. ಮಂಡಲ ಅಧ್ಯಕ್ಷ ಸಣ್ಣ ಕನಕಪ್ಪ, ಜಿಲ್ಲಾ ಉಪಾಧ್ಯಕ್ಷ ವಾಗೇಶ ಹಿರೇಮಠ, ಮಂಡಲ ಪ್ರಧಾನ ಕಾರ್ಯದರ್ಶಿ ಪ್ರಕಾಶ ಹಾದಿಮನಿ, ಪ್ರಮುಖರಾದ ರುದ್ರಸ್ವಾಮಿ ಇತರರಿದ್ದರು.

Published on

ಕನಕಗಿರಿ: ಬಿಜೆಪಿ ಸಂಸ್ಥಾಪನಾ ದಿನಾಚರಣೆ ನಿಮಿತ್ತ ಬಿಜೆಪಿ ಮಂಡಲ ಕಾರ್ಯಾಲಯ, ಬೂತ್ ಮಟ್ಟದ ಕಾರ್ಯಕರ್ತರು, ಪ್ರಮುಖರ ಮನೆಗಳ ಮೇಲೆ ಭಾನುವಾರ ಬಿಜೆಪಿ ಧ್ವಜಾರೋಹಣ ಮಾಡಲಾಯಿತು.

ಸ್ಥಳೀಯ 13ನೇ ವಾರ್ಡ್ ಪಪಂ ಸದಸ್ಯ ಸುರೇಶ ಗುಗ್ಗಳಶೆಟ್ರ ಮನೆಯ ಮೇಲೆ ಧ್ವಜಾರೋಹಣ ನೆರವೇರಿಸಿದ ಬಿಜೆಪಿ ಪ್ರಮುಖರು ನಂತರ ವಿವಿಧ ಬೂತ್‌ಗಳಲ್ಲಿನ ಕಾರ್ಯಕರ್ತರ ಮನೆಗಳ ಮೇಲೆ ಬಿಜೆಪಿ ಧ್ವಜ ಹಾರಿಸಿದರು. ಬಿಜೆಪಿ ವಿಶ್ವದ ಅತ್ಯಂತ ದೊಡ್ಡ ಪಕ್ಷವಾಗಿದ್ದು, ಅತ್ಯಂತ ಹೆಚ್ಚು ಕಾರ್ಯಕರ್ತರನ್ನು ಹೊಂದಿದೆ. ಬಿಜೆಪಿ ಪಕ್ಷದಿಂದ ಸತತ ಮೂರನೇ ಬಾರಿಗೆ ನರೇಂದ್ರ ಮೋದಿ ದೇಶದ ಚುಕ್ಕಾಣಿ ಹಿಡಿದು ವಿಶ್ವದಲ್ಲಿಯೇ ದೇಶವನ್ನು ಮಾದರಿಯನ್ನಾಗಿಸುತ್ತಿದ್ದಾರೆ. ಅಂಥ ಪಕ್ಷದ ಸಂಸ್ಥಾಪನಾ ದಿನದ ಅಂಗವಾಗಿ ಮನೆಗಳ ಮೇಲೆ ಪಕ್ಷದ ಧ್ವಜಾರೋಹಣ ಮಾಡಲಾಗುತ್ತಿದೆ ಎಂದು ಬಿಜೆಪಿ ಮುಖಂಡರು ತಿಳಿಸಿದರು.

ಪ್ರಮುಖರಾದ ಹನುಮಂತರೆಡ್ಡಿ, ದೊಡ್ಡಬಸವ ಹಿರೇಖೇಡ, ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ವಿನಾಯಕ, ಚಿತ್ರಕಿ, ಪೃಥ್ವಿ ಮ್ಯಾಗೇರಿ, ಹರೀಶ ಪೂಜಾರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net