ಬೆಂಕಿಗೆ ಆಹುತಿಯಾದ ಮೇವಿನ ಬಣವೆಗಳು

Untitled design (23)
Published on

ಕನಕಗಿರಿ: ತಾಲೂಕಿನ ಬೆನಕನಾಳ ಗ್ರಾಮದಲ್ಲಿ ಸೋಮವಾರ ಬೆಳಗ್ಗೆ ಬೆಂಕಿ ತಗುಲಿ ಮೂರು ಮೇವಿನ ಬಣವೆಗಳು ಸುಟ್ಟು ಕರಕಲಾಗಿವೆ. ಗ್ರಾಮದ ರಮೇಶ ಅವರ ಒಂದು ಟ್ರಾೃಕ್ಟರ್ ಲೋಡ್ ಭತ್ತದ ಹುಲ್ಲು, ಮೂರು ಟ್ರಾೃಕ್ಟರ್ ಲೋಡ್ ನವಣೆ ಹುಲ್ಲು, ಒಂದು ಟ್ರಾೃಕ್ಟರ್ ಲೋಡ್ ತೊಗರಿ ಹೊಟ್ಟಿನ ಬಣವೆಗಳು ಬೆಂಕಿಗೆ ಆಹುತಿಯಾಗಿವೆ. ಸ್ಥಳೀಯರು ನೀರು ಎರಚಿ ಬೆಂಕಿ ನಂದಿಸಲು ಪ್ರಯತ್ನಿಸಿದ್ದಾರೆ. ನಂತರ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ. ಗ್ರಾಮ ಆಡಳಿತ ಅಧಿಕಾರಿ ಶಿವಕುಮಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, 70 ಸಾವಿರ ರೂ.ನಷ್ಟವಾಗಿದೆ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net