ಮಳೆಗಾಗಿ ಪ್ರಾರ್ಥಿಸಿ ಗುರ್ಜಿ ಪೂಜೆ

Kanakagiri rain gurji pooje
ಕನಕಗಿರಿ ತಾಲೂಕಿನ ಬಸರಿಹಾಳ ಗ್ರಾಮದಲ್ಲಿ ಮಳೆಗಾಗಿ ಮಕ್ಕಳಿಂದ ಗುರ್ಜಿ ಪೂಜೆ ನಡೆಯಿತು.
Published on

ಕನಕಗಿರಿ: ಬಿತ್ತಿದ ಪೈರುಗಳು ಒಣಗುತ್ತಿರುವ ಹಿನ್ನೆಲೆಯಲ್ಲಿ ತಾಲೂಕಿನ ಬಸರಿಹಾಳ ಗ್ರಾಮದಲ್ಲಿ ಮಕ್ಕಳು ಗುರ್ಜಿ ಪೂಜೆ ಮಾಡಿದರು.

ಈಗಾಗಲೇ ಬಿತ್ತನೆ ಕಾರ್ಯ ಮುಗಿದಿದ್ದು, ಬೆಳೆ ಒಣಗಲಾರಂಭಿಸಿವೆ. ಇದರಿಂದ ಮಕ್ಕಳು ಮಡಿಯಿಂದ ಹಳ್ಳಕ್ಕೆ ತೆರಳಿ ಕಪ್ಪೆಯನ್ನು ಹಿಡಿದು ಮಡಕೆಯಲ್ಲಿ ಹಾಕಿ ಮನೆಮನೆಗೆ ತೆರಳಿ ಧಾನ್ಯ ಸಂಗ್ರಹಿಸಿದರು. ದೇವಸ್ಥಾನದ ಬಳಿ ಅಡುಗೆ ಮಾಡಿ ಪ್ರಸಾದ ಬಡಿಸಿ ಮಳೆಗಾಗಿ ಪ್ರಾರ್ಥಿಸಿದರು.

ಮಳೆಯಾಗದಿದ್ದಾಗ ಗುರ್ಜಿ ಪೂಜೆ ಮಾಡುವ ಪದ್ಧತಿ ಹಿಂದಿನಿಂದಲೂ ಜಾರಿಯಲ್ಲಿದ್ದು, ಇದೇ ಸಂಪ್ರದಾಯದಂತೆ ಪೂಜೆ ಮಾಡಲಾಯಿತು. ಹೀಗೆ ಮಾಡುವುದರಿಂದ ವರುಣ ದೇವ ಕರುಣೆ ತೋರುತ್ತಾನೆ ಎಂಬುದು ಇಲ್ಲಿನವರ ನಂಬಿಕೆಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net