

ಕನಕಗಿರಿ: ಮುಸ್ಲಿಮರು ಬಕ್ರೀದ್‌ಅನ್ನು ಶಾಂತಿಯುತವಾಗಿ ಆಚರಿಸಬೇಕೆಂದು ಪಿಐ ಎಂ.ಡಿ. ಫೈಜುಲ್ಲಾ ಹೇಳಿದರು.
ಇಲ್ಲಿನ ಪೊಲೀಸ್ ಠಾಣೆಯಲ್ಲಿ ಬುಧವಾರ ಹಮ್ಮಿಕೊಳ್ಳಲಾಗಿದ್ದ ಬಕ್ರೀದ್ ಶಾಂತಿಸಭೆಯಲ್ಲಿ ಮಾತನಾಡಿದರು. ತ್ಯಾಗದ ಹಬ್ಬವೆಂದೇ ಕರೆಯುವ ಬಕ್ರೀದ್ ಸಂಭ್ರಮದಿಂದ ಆಚರಿಸಲು ಎಲ್ಲ ಸಮುದಾಯಗಳು ಸಹಕಾರ ನೀಡಬೇಕು.
ಈದ್ಗಾ ಮೈದಾನಕ್ಕೆ ಶಾಂತಿಯುತವಾಗಿ ತೆರಳಿ ಪ್ರಾರ್ಥನೆ ಸಲ್ಲಿಸಬೇಕು. ಕುರ್ಬಾನಿ ಕೊಡುವ ಮೂಲಕ ಮುಸ್ಲಿಮರು ಹಬ್ಬ ಆಚರಿಸಲಿದ್ದು, ಒಗ್ಗಟ್ಟಾಗಿ ಹಬ್ಬವನ್ನು ಆಚರಿಸಿ ಎಂದು ತಿಳಿಸಿದರು.