ಅಯ್ಯಪ್ಪಸ್ವಾಮಿ ದೇವಸ್ಥಾನದ ಯಾತ್ರಿ ನಿವಾಸಕ್ಕೆ ನಿವೇಶನ ನೀಡಿ

Kanakagiri Ayyappa swami Seva Samiti
ವಿವಿಧ ಬೇಡಿಕೆ ಈಡೇರಿಕೆ ಆಗ್ರಹಿಸಿ ಕನಕಗಿರಿಯ ಅಯ್ಯಪ್ಪ ಸೇವಾ ಸಮಿತಿ ವತಿಯಿಂದ ಪಪಂ ಮುಖ್ಯಾಧಿಕಾರಿ ತಿರುಮಲಮ್ಮರಿಗೆ ಸೋಮವಾರ ಮನವಿ ಸಲ್ಲಿಸಲಾಯಿತು.
Published on

ಕನಕಗಿರಿ: ಸ್ಥಳೀಯ ಎಪಿಎಂಸಿಯಲ್ಲಿನ ಅಯ್ಯಪ್ಪಸ್ವಾಮಿ ದೇವಸ್ಥಾನದ ಸುತ್ತ ಸಿಸಿ ರಸ್ತೆ ನಿರ್ಮಾಣ ಮಾಡಬೇಕು ಹಾಗೂ ಯಾತ್ರಿ ನಿವಾಸ ನಿರ್ಮಾಣಕ್ಕೆ ನಿವೇಶನ ಒದಗಿಸುವಂತೆ ಆಗ್ರಹಿಸಿ ಅಯ್ಯಪ್ಪ ಸೇವಾ ಸಮಿತಿ ವತಿಯಿಂದ ಪಪಂ ಅಧ್ಯಕ್ಷ ರವೀಂದ್ರ ಸಜ್ಜನ ಹಾಗೂ ಮುಖ್ಯಾಧಿಕಾರಿ ತಿರುಮಲಮ್ಮಗೆ ಸೋಮವಾರ ಮನವಿ ಸಲ್ಲಿಸಲಾಯಿತು.

ಸಮಿತಿಯ ಉಪಾಧ್ಯಕ್ಷ ಮಲ್ಲಿಕಾರ್ಜುನರೆಡ್ಡಿ ಮಾದಿನಾಳ ಮಾತನಾಡಿ, ದೇವಸ್ಥಾನಕ್ಕೆ ಬರುವ ಭಕ್ತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಬರುವ ಭಕ್ತರಿಗೆ ಅನುಕೂಲವಾಗಲೆಂದು ಪ್ರಾಂಗಣದ ಸುತ್ತಲೂ ಸಿಸಿ ರಸ್ತೆ ಸೇರಿದಂತೆ ದೇಗುಲದ ಪಕ್ಕದಲ್ಲಿನ ನಿವೇಶನವನ್ನು ಯಾತ್ರಾ ನಿವಾಸ ನಿರ್ಮಿಸಲು ನೀಡಬೇಕೆಂದು ಆಗ್ರಹಿಸಿದರು. ಪದಾಧಿಕಾರಿಗಳಾದ ಹೊಳಿಯಪ್ಪ ಪಾಲಿ, ವೆಂಕಟೇಶ ಬಲಿಜ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net