ಆಟೋ ನಿಲುಗಡೆಗೆ ಸ್ಥಳಾವಕಾಶ ಕೊಡಲು ಕರ್ನಾಟಕ ವಿಕಾಸ ವೇದಿಕೆಯಿಂದ ಪಪಂ ಮುಖ್ಯಾಧಿಕಾರಿಗೆ ಮನವಿ

25022020 Kanakagiri Auto Driverst Appeal
Published on

ಕನಕಗಿರಿ: ಪಟ್ಟಣದಲ್ಲಿ ಆಟೋಗಳನ್ನು ನಿಲುಗಡೆ ಮಾಡಲು ಸ್ಥಳಾವಕಾಶ ಒದಗಿಸುವಂತೆ ಒತ್ತಾಯಿಸಿ ಕರ್ನಾಟಕ ವಿಕಾಸ ವೇದಿಕೆಯ ತಾಲೂಕು ಆಟೋ ಘಟಕದ ಸದಸ್ಯರು ಪಪಂ ಮುಖ್ಯಾಧಿಕಾರಿ ತಿರುಮಲಾಂಬಗೆ ಮಂಗಳವಾರ ಮನವಿ ಸಲ್ಲಿಸಿದರು.

ಸಂಘಟನೆಯ ಕೃಷ್ಣ ಯಾದವ್ ಮಾತನಾಡಿ, ಕನಕಗಿರಿ ನಗರ ವೇಗವಾಗಿ ಬೆಳೆಯುತ್ತಿದೆ. ಪ್ರತಿನಿತ್ಯ 200ಕ್ಕೂ ಅಧಿಕ ಆಟೋಗಳು ಸಂಚರಿಸುತ್ತಿವೆ. ಆದರೆ, ನಿಲುಗಡೆಗೆ ಸ್ಥಳಾವಕಾಶವಿಲ್ಲ ಜನಸಾಮಾನ್ಯರಿಗೆ ಮತ್ತು ಪಾದಚಾರಿಗಳಿಗೆ ತೊಂದರೆಯಾಗಿದೆ. ಪ್ರಮುಖ ವೃತ್ತಗಳಲ್ಲಿ ಆಟೋ ನಿಲ್ದಾಣಗಳನ್ನು ನಿರ್ಮಿಸಬೇಕೆಂದು ಒತ್ತಾಯಿಸಿದರು. ಪ್ರಮುಖರಾದ ಹನುಮೇಶ ವಾಲೇಕಾರ, ಮಲ್ಲಪ್ಪ, ಗೋಪಿ, ಜಗ್ಗೇಶ, ಮಹ್ಮದ್, ಮಂಜು, ರಮೇಶ, ಮಲ್ಲಿಕಾರ್ಜುನ ನಾಗರಾಜ ಕಿನ್ನಾಳ, ಮಹಿಬೂಬು, ರಮೇಶ, ನಾಗರಾಜ ಹನುಗುಂದ ಸೇರಿದಂತೆ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net