ರಾಯರು ಬೇಡಿದ್ದನ್ನು ನೀಡುವ ಕಾಮಧೇನು

UNTILETED 6
Published on

ಕನಕಗಿರಿ: ಆಷಾಢ ಮಾಸದ ಅಂಗವಾಗಿ ಕೊಪ್ಪಳ ತಾಲೂಕಿನ ಕಿನ್ನಾಳ ಗ್ರಾಮದ 40ಕ್ಕೂ ವ್ಯಾಪಾರಿಗಳು ಕೈಗೊಂಡಿರುವ 22ನೇ ವರ್ಷದ ಮಂತ್ರಾಲಯ ಪಾದಯಾತ್ರೆಯು ಬುಧವಾರ ಪಟ್ಟಣಕ್ಕೆ ಆಗಮಿಸಿತು.

ಪಾದಯಾತ್ರೆ ಸಮಿತಿ ಅಧ್ಯಕ್ಷ ರಾಘವೇಂದ್ರ ಹಣಗಿ ಮಾತನಾಡಿ, ಕಿನ್ನಾಳ ಗ್ರಾಮದ ವ್ಯಾಪಾರಿಗಳು ರಾಘವೇಂದ್ರ ಸ್ವಾಮಿಗಳ ಭಕ್ತರು. 22 ವರ್ಷದಿಂದ ಪಾದಯಾತ್ರೆ ಹಮ್ಮಿಕೊಳ್ಳಲಾಗುತ್ತಿದ್ದು, 40ಕ್ಕೂ ಹೆಚ್ಚು ಭಕ್ತರು ಯಾತ್ರೆಯಲ್ಲಿ ಭಾಗಿಯಾಗಿದ್ದಾರೆ. ಆರು ದಿನಗಳ ಕಾಲ ಪಾದಯಾತ್ರೆ ನಡೆಯಲಿದ್ದು, 190 ಕೀ.ಮೀ ನಡೆದುಕೊಂಡು ಜು.13ರಂದು ಮಂತ್ರಾಲಯದ ರಾಯರ ದರ್ಶನಕ್ಕೆ ತೆರಳುತ್ತೇವೆ. ರಾಯರು ಬೇಡಿದ್ದನ್ನು ನೀಡುವ ಕಾಮಧೇನು, ಕಲ್ಪವೃಕ್ಷವಾಗಿದ್ದಾರೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net