

ಕನಕಗಿರಿ: ಆರ್ಯವೈಶ್ಯ ಸಮಾಜದ ಕುಲದೇವತೆ ವಾಸವಿ ಜಯಂತಿಯನ್ನು ಪಟ್ಟಣದಲ್ಲಿ ಅದ್ದೂರಿಯಾಗಿ ಬುಧವಾರ ಆಚರಿಸಲಾಯಿತು.
ಜಯಂತಿ ನಿಮಿತ್ತವಾಗಿ ರಾಜಬೀದಿಯಲ್ಲಿನ ಗಜಲಕ್ಷ್ಮೀದೇವಿ ದೇವಸ್ಥಾನದಿಂದ ಸಮಾಜದ ಮಹಿಳೆಯರು ಕಳಸ ಕುಂಭಗಳೊಂದಿಗೆ ಮೆರವಣಿಗೆಯಲ್ಲಿ ನಗರೇಶ್ವರ ದೇವಸ್ಥಾನಕ್ಕೆ ಆಗಮಿಸಿದರು. ಪಟಾಕಿ, ವಾದ್ಯಗಳು ಮೆರವಣಿಗೆಗೆ ಶೋಭೆ ತಂದವು.
ವಾಸವಿ ಜಯಂತಿ ನಿಮಿತ್ತ ದೇವಸ್ಥಾನದಲ್ಲಿ ಅಷ್ಟೋತ್ತರ ನಾಮಾವಳಿ, ಕುಂಕುಮ, ಮಹಾ ಮಂಗಳಾರತಿ ನಡೆಯಿತು. ಇನ್ನೂ ದೇವಸ್ಥಾನದ ಗಣಪತಿ, ನಗರೇಶ್ವರ ಹಾಗೂ ಕನ್ಯಕಾ ಪರಮೇಶ್ವರಿದೇವಿಗೆ ವಿಶೇಷ ಪೂಜೆ, ಪುಷ್ಪ, ಆಭರಣಗಳಿಂದ ಅಲಂಕಾರಗೊಳಿಸಲಾಗಿತ್ತು. ನಂತರ ಭಕ್ತರಿಗೆ ಅನ್ನ ಸಂತರ್ಪಣೆ ನಡೆಯಿತು.
ಪಾಂಡುರಂಗ ಜನಾದ್ರಿ, ಸತ್ಯ ನಾರಾಯಣ ಖ್ಯಾಡೇದ, ಮಹಾಬಳೇಶ ಶ್ರೇಷ್ಠಿ, ವೆಂಕಟೇಶ ಸೌದ್ರಿ, ಹನುಮೇಶ ಜನಾದ್ರಿ, ರಮೇಶ ಶ್ರೇಷ್ಠಿ ಸಿರಿವಾರ, ಹನುಮೇಶ ಯಲಬುರ್ಗಿ, ಸತೀಶ ಅಂಜನಳ್ಳಿ, ಮಂಜುನಾಥ ಬೊಕ್ಕಸದ, ಹನುಮೇಶ ಬೊಕ್ಕಸದ, ರಮೇಶ ಮಸ್ಕಿ, ನಾಗಭೂಷಣ ಜನಾದ್ರಿ, ಸಾಗರ ಜನಾದ್ರಿ, ವಿಜಯಲಕ್ಷ್ಮೀ ಜನಾದ್ರಿ, ಸಹನಾ ಖ್ಯಾಡೇದ, ಸವಿತಾ ಯಲಬುರ್ಗಿ, ಉಷಾರಾಣಿ ಬೊಕ್ಕಸದ, ರಾಧಮ್ಮ ಜನಾದ್ರಿ, ಗೀತಾ ಜನಾದ್ರಿ, ಶ್ವೇತಾ ಶೆಟ್ರ, ಮಾನಸ ಭಕ್ಕಸ್ತ್, ಲಲಿತಾ ಜನಾದ್ರಿ, ಕಾವ್ಯ ಯಲಬುರ್ಗಿ, ಪಲ್ಲವಿ ಅಂಜನಳ್ಳಿ, ರೋಶನಿ ಜನಾದ್ರಿ, ಭಾಗ್ಯಲಕ್ಷ್ಮೀ ವಡ್ರಕಲ್ ಸೇರಿ ಇತರರಿದ್ದರು.