

ಕನಕಗಿರಿ: ತಾಲೂಕಿನ ಗೌರಿಪುರ, ಹುಲಿಹೈದರ ಹಾಗೂ ಅಡವಿಬಾವಿ ಗ್ರಾಮದಲ್ಲಿ ವಿಶ್ವಜ್ಞಾನಿ ಡಾ.ಬಿ.ಆರ್.ಅಂಬೇಡ್ಕರ್ ನಗರ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆ ಹಾಗೂ ಜಿಲ್ಲಾಡಳಿತದಿಂದ ಬೀದಿ ನಾಟಕ ಮೂಲಕ ಶುಕ್ರವಾರ ಅಸ್ಪಶ್ಯತೆ ನಿವಾರಣೆ ಜಾಗೃತಿ ಮೂಡಿಸಲಾಯಿತು.
ಸಂಸ್ಥೆ ಅಧ್ಯಕ್ಷ ಪಾಮಣ್ಣ ಅರಳಿಗನೂರ ಮಾತನಾಡಿ, ಮನುಷ್ಯರೆಲ್ಲರೂ ಒಂದೇ. ಆದರೆ, ಜಾತಿಯ ಆಧಾರದ ಮೇಲೆ ಮೇಲು ಕೀಳು ಎಂದು ಆಚರಿಸುವುದು ತಪ್ಪು. ದೇವಸ್ಥಾನ, ಮಂದಿರ ಇತರ ಸಾರ್ವಜನಿಕ ಸ್ಥಳಗಳಲ್ಲಿ ಅಸ್ಪಶ್ಯತೆ ಆಚರಣೆ ಮಾಡುವುದು ಕಾನೂನು ಬಾಹಿರ. ಇಂಥ ಆಚರಣೆಗಳು ಕಂಡಲ್ಲಿ ಕಾನೂನು ರೀತಿ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದರು.
ಸಮಾಜ ಕಲ್ಯಾಣ ಇಲಾಖೆ ವಾರ್ಡನ್ ವೀರೇಶ ಚಕ್ರಸಾಲಿ, ಗೌರಿಪುರ ಪಿಡಿಒ ಅಮರೇಶ ರಾಥೋಡ್, ಪಪಂ ಸದಸ್ಯ ಶೇಷಪ್ಪ ಪೂಜಾರ್, ಪ್ರಮುಖರಾದ ನರಸಪ್ಪ ಕುರುಗೋಡು, ಕನಕಾಚಲ ನಾಯಕ, ಬೆಟ್ಟಪ್ಪ ಜೀರಾಳ, ಮರಿಸ್ವಾಮಿ ಮದಲಗಟ್ಟಿ, ರಾಮಲಿಂಗಪ್ಪ ಕುಕುನೂರು, ನಾಗರತ್ನಾ ಮಾದನೂರು ಇತರರಿದ್ದರು.