ಗಂಗಾಮಾತೆ-ಚೌಡಯ್ಯ ಮೆರವಣಿಗೆ ಅದ್ದೂರಿ

Chowdaiah Jayanti
ಕನಕಗಿರಿಯಲ್ಲಿ ಶುಕ್ರವಾರ ಶರಣ ಅಂಬಿಗೇರ ಚೌಡಯ್ಯ ಜಯಂತಿ ನಿಮಿತ್ತ ಚೌಡಯ್ಯ ಹಾಗೂ ಗಂಗಾಮಾತೆ ಭಾವಚಿತ್ರ ಮೆರವಣಿಗೆ ಅದ್ದೂರಿಯಾಗಿ ನಡೆಯಿತು.
Published on

ಕನಕಗಿರಿ: ಪಟ್ಟಣದಲ್ಲಿ ಗಂಗಾಮತ ಸಮಾಜ ಹಾಗೂ ಅಂಬಿಗರ ಚೌಡಯ್ಯ ಯುವಕ ಸಂಘದಿಂದ ಅಂಬಿಗೇರ ಚೌಡಯ್ಯ ಜಯಂತಿ ಶುಕ್ರವಾರ ಆಚರಿಸಲಾಯಿತು. ಈ ನಿಮಿತ್ತ ಗಂಗಾ ಪರಮೇಶ್ವರಿ ದೇವಸ್ಥಾನದಿಂದ ಗಂಗಾ ಪರಮೇಶ್ವರಿ ಹಾಗೂ ಅಂಬಿಗೇರ ಚೌಡಯ್ಯ ಭಾವಚಿತ್ರ ಮೆರವಣಿಗೆ ನಡೆಯಿತು.

ಮಹಿಳೆಯರ ಕಳಸ-ಕುಂಭದೊಂದಿಗೆ ರಾಜಬೀದಿ, ಕನಕಾಚಲ ದೇವಸ್ಥಾನದ ಮೂಲಕ ಅಂಬಿಗೇರ ಚೌಡಯ್ಯ ವೃತ್ತದವರೆಗೆ ಮೆರವಣಿಗೆ ಸಾಗಿತು. ಯುವಕರು ಡಿಜೆ ಹಾಡಿಗೆ ಕುಣಿದು ಕುಪ್ಪಳಿಸಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗಂಗಾಧರಸ್ವಾಮಿ ಕಲುಬಾಗಿಲಮಠ, ಜಿಪಂ ಮಾಜಿ ಸದಸ್ಯ ವೀರೇಶ ಸಮಗಂಡಿ, ಪಪಂ ಉಪಾಧ್ಯಕ್ಷ ಕಂಠಿರಂಗಪ್ಪ ನಾಯಕ, ಸದಸ್ಯ ಸಂಗಪ್ಪ ಸಜ್ಜನ್, ಸಮಾಜದ ಪ್ರಮುಖರಾದ ಕನಕಪ್ಪ ಗಂಗಾಮತ, ವಿರುಪಣ್ಣ ಕಲ್ಲೂರು, ದುರುಗೇಶ ವಾಲೇಕಾರ, ಹನುಮೇಶ, ಟಿ.ಜೆ. ರಾಜಶೇಖರ, ಬಸವರಾಜ, ಹುಲಗಪ್ಪ ವಾಲೇಕಾರ, ಹನುಮೇಶ ಬೆಳಗೋಡ, ಕೃಷ್ಣ ವದ್ದಿಗೇರಿ, ರಾಮು ಕಂಪ್ಲಿ, ವೆಂಕಟೇಶ ಕಂಪ್ಲಿ, ಮಲ್ಲಿಕಾರ್ಜುನ ಇತರರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net