ಕೃಷಿ-ಕಂದಾಯ ಇಲಾಖೆಯಿಂದ ಜಂಟಿ ಸರ್ವೇ

Joint Survey
ಕನಕಗಿರಿ ತಾಲೂಕಿನ ಹುಲಿಹೈದರ ಹೋಬಳಿಯಲ್ಲಿ ಮಳೆಗೆ ಹಾಳಾದ ಬೆಳೆಗಳ ಜಂಟಿ ಸರ್ವೇಯನ್ನು ಕೃಷಿ ಹಾಗೂ ಕಂದಾಯ ಇಲಾಖೆ ಸಿಬ್ಬಂದಿ ನಿರ್ವಹಿಸಿದರು. ಕೃಷಿ ಅಧಿಕಾರಿ ಶಿವಾನಂದ ಮಾಳಗಿ, ಕಂದಾಯ ನಿರೀಕ್ಷಕ ರವಿಕುಮಾರ ನಾಯ್ಕ, ಗ್ರಾಮ ಆಡಳಿತಾಧಿಕಾರಿ ಹಾಲೇಶ, ಕೃಷಿ ಇಲಾಖೆ ತಾಂತ್ರಿಕ ಅಧಿಕಾರಿ ಶಿವಪ್ಪ ಇದ್ದರು.
Published on

ಕನಕಗಿರಿ: ಪಟ್ಟಣ ಸೇರಿ ತಾಲೂಕು ವ್ಯಾಪ್ತಿಯಲ್ಲಿ ಕಳೆದೊಂದು ವಾರದಿಂದ ಸುರಿದ ಮಳೆಗೆ ಹಾನಿಯಾದ ಬೆಳೆ ಸರ್ವೇಗೆ ಕೃಷಿ ಇಲಾಖೆ ಮುಂದಾಗಿದ್ದು, ಕಂದಾಯ ಇಲಾಖೆ ಸಹಯೋಗದಲ್ಲಿ ತಾಲೂಕಿನ ಹುಲಿಹೈದರ ಹೋಬಳಿಯಲ್ಲಿ ಸೋಮವಾರ ಜಂಟಿ ಸರ್ವೇ ಕಾರ್ಯ ನಡೆಸಲಾಯಿತು.

ಹುಲಿಹೈದರ ಹೋಬಳಿ ವ್ಯಾಪ್ತಿಗೆ ಒಳಪಡುವ ಜಮೀನುಗಳಿಗೆ ತೆರಳಿದ ಅಧಿಕಾರಿಗಳು, ಜಮೀನಿನಲ್ಲಿ ನಿಂತ ನೀರಿನಲ್ಲಿಯೇ ಸರ್ವೇ ಮಾಡುತ್ತಿದ್ದಾರೆ. ಹೆಚ್ಚಾಗಿ ತೊಗರಿ, ಮೆಕ್ಕೆಜೋಳ, ಶೇಂಗಾ, ಸಜ್ಜೆ, ಹತ್ತಿ ಸೇರಿ ನಾನಾ ಬೆಳೆಗಳು ನಾಶವಾಗಿರುವುದು ಕಂಡು ಬಂದಿದೆ. ರೈತರು ನೀಡಿದ ಮಾಹಿತಿ ಮೇರೆಗೆ ಜಮೀನಿಗೆ ತೆರಳಿ ಜಿಪಿಎಸ್ ಮತ್ತು ಬೆಳೆ ನಷ್ಟವಾದ ವರದಿ ಮಾಡಿಕೊಳ್ಳುತ್ತಿದ್ದೇವೆ. ಎಲ್ಲೆಲ್ಲಿ ಎಷ್ಟು ಪ್ರಮಾಣದಲ್ಲಿ ಹಾನಿಯಾಗಿದೆ ಎಂಬುದನ್ನು ಪರಿಶೀಲಿಸಿ ವರದಿ ಮಾಡಿಕೊಳ್ಳಲಾಗುತ್ತಿದೆ ಎಂದು ಕೃಷಿ ಅಧಿಕಾರಿ ಶಿವಾನಂದ ಮಾಳಗಿ ತಿಳಿಸಿದರು.

ಕಂದಾಯ ನಿರೀಕ್ಷಕ ರವಿಕುಮಾರ ನಾಯ್ಕ, ಗ್ರಾಮ ಆಡಳಿತಾಧಿಕಾರಿ ಹಾಲೇಶ, ಕೃಷಿ ಇಲಾಖೆ ತಾಂತ್ರಿಕ ಅಧಿಕಾರಿ ಶಿವಪ್ಪ ಇತರರಿದ್ದರು.

ಸತತ ಮಳೆಗೆ ಹಾಳಾಗಿರುವ ರೈತರ ಜಮೀನುಗಳಲ್ಲಿ ಸರ್ವೇ ಕಾರ್ಯ ಮಾಡುತ್ತಿದ್ದು, ಕನಕಗಿರಿ ತಾಲೂಕು ಸಂಪೂರ್ಣವಾಗಿ ಸರ್ವೇ ಮಾಡಿ ಪರಿಹಾರಕ್ಕಾಗಿ ವರದಿ ಸಲ್ಲಿಸಲಾಗುವುದು.

ರುದ್ರೇಶಪ್ಪ

ಜೆಡಿ ಕೃಷಿ ಇಲಾಖೆ, ಕೊಪ್ಪಳ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net