

ಬನ್ನಿಕುಪ್ಪೆ; ಇಲ್ಲಿನ ಗ್ರಾಮ ಪಂಚಾಯಿತಿ ಆವರಣದಲ್ಲಿ ಸೋಮವಾರ ಕನಕದಾಸ ಜಯಂತಿ ಆಚರಿಸಲಾಯಿತು.
ಕನಕದಾಸರು ಭಕ್ತಿ ಪಂಥದ ಮುಖ್ಯ ಹರಿದಾಸರಲ್ಲಿ ಒಬ್ಬರು. ಇವರ ಮೂಲ ಹೆಸರು ತಿಮ್ಮಪ್ಪನಾಯಕ. ದಾಸ ಪರಂಪರೆಯಲ್ಲಿ ಬರುವ 250ಕ್ಕೂ ಹೆಚ್ಚು ದಾಸರಲ್ಲಿ ಕನಕದಾಸರು ಪ್ರಸಿದ್ಧರು. ಹಾಗೆಯೇ ಕರ್ನಾಟಕ ಸಂಗೀತಕ್ಕೆ ಇವರ ಅಪಾರ ಕೊಡುಗೆ ಅಪಾರ ಎಂದು ಪಿಡಿಒ ರಾಘವೇಂದ್ರ ಪ್ರಸನ್ನ ಸ್ಮರಿಸಿದರು.
ದಾಸ ಸಾಹಿತ್ಯಕ್ಕೆ ವೈಶಿಷ್ಟ್ಯಪೂರ್ಣವಾದ ಮೆರುಗು ತಂದಿತ್ತ ಪಾಂಡಿತ್ಯಪೂರ್ಣ ಕವಿ ಕನಕದಾಸರು. ಸಹಜ ಬದುಕಿನಿಂದ ಕೀರ್ತನಕಾರರಾಗಿ, ತತ್ವಜ್ಞಾನಿಯಾಗಿ, ಸಂತರಾಗಿ ಕನ್ನಡ ನಾಡಿನ ಸಾಂಸ್ಕೃತಿಕ ಪರಂಪರೆಗೆ ಇವರ ಕೊಡುಗೆ ಅನನ್ಯ. ದಂಡನಾಯಕರಾಗಿದ್ದ ಇವರು ಯುದ್ಧದಲ್ಲಿ ಸೋತ ನಂತರ ವೈರಾಗ್ಯ ಉಂಟಾಗಿ ಹರಿಭಕ್ತದಾಸರಾದರು ಎಂಬ ಮಾತಿದೆ ಎಂದರು.
ಕಾರ್ಯಕ್ರಮದಲ್ಲಿ ಗ್ರಾಪಂ ಅಧ್ಯಕ್ಷ ಬಿ.ಆರ್.ಗೋವಿಂದನಾಯಕ, ಉಪಾಧ್ಯಕ್ಷೆ ಎಂ.ಎನ್.ಐಶ್ವರ್ಯಾ, ಕಾರ್ಯದರ್ಶಿ ಸಿ.ಎಸ್. ವೇದಮೂರ್ತಿ, ಸದಸ್ಯರಾದ ಎಂ.ಸಿ.ಚಂದ್ರಶೇಖರ್, ದಿನೇಶ್, ಮುಖಂಡರಾದ ಲೋಕೇಶ್‌ನಾಯಕ, ಮಹೇಶ್ ಇತರರಿದ್ದರು.