

ಮಂಗಳೂರು: ನಗರದ ಹಂಪನ್‌ಕಟ್ಟೆಯಲ್ಲಿರುವ ವಿಶ್ವವಿದ್ಯಾನಿಲಯ ಕಾಲೇಜಿನ ಗ್ರಂಥಾಲಯದಲ್ಲಿ ಯೋಜನಾ ವೇದಿಕೆ, ಗ್ರಂಥಾಲಯ ಹಾಗೂ ಆಂತರಿಕ ಗುಣಮಟ್ಟ ಖಾತರಿ ಕೋಶ ಸಂಯುಕ್ತ ಆಶ್ರಯದಲ್ಲಿ ಸಂತ ಕನಕದಾಸರ ಪುಸ್ತಕಗಳ ಅವಲೋಕನ ಮತ್ತು ವಿಮರ್ಶೆ ಕಾರ್ಯಕ್ರಮ ಜರುಗಿತು.
ಯೋಜನಾ ವೇದಿಕೆಯ ಪ್ರಥಮ ಬಿ.ಎ. ತರಗತಿಯ ವಿದ್ಯಾರ್ಥಿಗಳಾದ ಶ್ರೀನಿವಾಸ ವಡ್ಡರ್ ಹಾಗೂ ಸಂದೀಪ್ ಕನಕದಾಸರಿಗೆ ಸಂಬಂಧಪಟ್ಟ ಪುಸ್ತಕದ ವಿಮರ್ಶೆ ನಡೆಸಿದರು. ಪ್ರಾಂಶುಪಾಲರಾದ ಡಾ. ಅನಸೂಯ ರೈ ಅಧ್ಯಕ್ಷತೆ ವಹಿಸಿದ್ದರು.
ಗ್ರಂಥಪಾಲಕಿ ಡಾ.ವನಜಾ ಸ್ವಾಗತಿಸಿದರು. ಯೋಜನಾ ವೇದಿಕೆಯ ಸಂಚಾಲಕ ಡಾ.ಸುರೇಶ್ ವಂದಿಸಿದರು. ವಿದ್ಯಾರ್ಥಿನಿ ತನಿಶಾ ಪುತ್ರನ್ ಕಾರ್ಯಕ್ರಮ ನಿರ್ವಹಿಸಿದರು. ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ.ಜಯವಂತ ನಾಯಕ್ ಹಾಗೂ ಉಪನ್ಯಾಸಕ ಧೀರಜ್ ಉಪಸ್ಥಿತರಿದ್ದರು.