

ಹಗರಿಬೊಮ್ಮನಹಳ್ಳಿ: ತಾಲೂಕಿನ ಮುಟುಗನಹಳ್ಳಿಯಲ್ಲಿ ಕನಕದಾಸರ ಜಯಂತಿ ಬುಧವಾರ ಅದ್ದೂರಿಯಾಗಿ ಆಚರಿಸಲಾಯಿತು. ಸಮುದಾಯದ ಮುಖಂಡರು ಬೀರಪ್ಪ ದೇವಸ್ಥಾನದವರೆಗೆ ಮೆರವಣಿಗೆ ನಡೆಸಿ ಬಳಿಕ ಸಂಗೊಳ್ಳಿ ರಾಯಣ್ಣ ಅವರ ಮೂರ್ತಿಗೆ ಹಾರಹಾಕಿದರು. ತಾಲೂಕು ಕುರುಬರ ಸಂಘದ ನಿಕಟಪೂರ್ವ ಅಧ್ಯಕ್ಷ ಬುಡ್ಡಿ ಬಸವರಾಜ ಮಾತನಾಡಿ, ಕನಕದಾಸರು ಕೀರ್ತನೆಗಳ ಮೂಲಕ ಸಾಮಾಜಿಕ ಕ್ರಾಂತಿಯನ್ನೇ ಮಾಡಿದ್ದರು. ಅವರ ತತ್ವಾದರ್ಶವನ್ನು ಅಳವಡಿಸಿಕೊಳ್ಳಬೇಕು ಎಂದರು. ಪ್ರಮುಖರಾದ ಕೆ.ಹನುಮಂತಪ್ಪ, ರಾಮಪ್ಪ, ಮುದೇಗೌಡರು ಬಸವರಾಜ, ಮಾಸ್ತಿ ಗಂಗಪ್ಪ, ಚಿನ್ನಗೌಡ್ರು ನಾಗಪ್ಪ, ಕನಕೇರಿ ಕನಕಪ್ಪ, ನರಿ ಸಣ್ಣಬಸಪ್ಪ, ಟಿ. ಕೊಂಗಾಲಿ ಕೊಟ್ರಪ್ಪ, ಟಿ.ಸಿ.ದೊಡ್ಡಬಸಪ್ಪ, ಸೊನ್ನದ ನಿಂಗಪ್ಪ, ಕರಿಬಸಪ್ಪ, ಹಿರೇಬಸಪ್ಪನವರ ದೊಡ್ಡಬಸಪ್ಪ, ಕೋಲ ಶಾಂತಪ್ಪ, ಸೊನ್ನದ ನೀಲಪ್ಪ ಇತರರಿದ್ದರು.