ಸಮಾಜದಲ್ಲಿ ಸಮಾನತೆ ಸಾರಿದ ಮಹನೀಯ

Untitled design (4)
ಬೇಳೂರಿನಲ್ಲಿ ಕನಕದಾಸರ ಜಯಂತಿ ಕಾರ್ಯಕ್ರಮದಲ್ಲಿ ಪ್ರಮುಖರಾದ ಗಾಳೆಪ್ಪ, ಗವಿ, ಅಜ್ಜಪ್ಪ, ಬಸವರಾಜ, ಶರಣಪ್ಪ, ರಾಮಣ್ಣ, ಪ್ರಕಾಶ ಮಾದಣ್ಣವರ, ಯಲ್ಲಪ್ಪ ಕುರುಬರ, ಬಸವರಾಜಮ ಸಿದ್ದಾರೂಢ ಚೆಲ್ಲಾ, ನಿಂಗಪ್ಪ ಪೂಜಾರ, ಬಸವರಾಜ ಕಲಕೇರಿ ಇನ್ನಿತರರಿದ್ದರು.
Published on

ಅಳವಂಡಿ: ಕೀರ್ತನೆ ಮೂಲಕ ಸಮಾಜದ ಅಂಕುಡೊಂಕುಗಳನ್ನು ತಿದ್ದಿದ ಮಹಾನ್ ಭಕ್ತ ಶ್ರೇಷ್ಠ ಕನಕದಾಸರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ ಎಂದು ಮಾಜಿ ಗ್ರಾಪಂ ಅಧ್ಯಕ್ಷ ಗಾಳೆಪ್ಪ ಸುಣಗಾರ ತಿಳಿಸಿದರು.

ಮಹಾನ್ ಭಕ್ತ ಶ್ರೇಷ್ಠ ಕನಕದಾಸರು

ಸಮೀಪದ ಬೇಳೂರು ಗ್ರಾಮದ ಬೆಟ್ಟದಲಿಂಗೇಶ್ವರ ದೇವಸ್ಥಾನದಲ್ಲಿ ಗ್ರಾಮಸ್ಥರು ಶುಕ್ರವಾರ ಹಮ್ಮಿಕೊಂಡಿದ್ದ ಕನಕದಾಸರ ಜಯಂತಿ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು. ಕನಕದಾಸರು ಸಮಾಜದಲ್ಲಿ ಸಮಾನತೆಗಾಗಿಜಾಗೃತಿ ಮೂಡಿಸಿದರು. ಅವರ ಸಾಹಿತ್ಯವನ್ನು ಅಧ್ಯಯನ ಮಾಡುವ ಅವಶ್ಯಕತೆ ಇದೆ ಎಂದರು.

ಇದನ್ನೂ ಓದಿ:

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net