

ಮೊಳಕಾಲ್ಮೂರು: ಕನಕದಾಸರ ಸಾಮಾಜಿಕ ಚಿಂತನೆಗಳು ಸರ್ವ ಕಾಲಕ್ಕೂ ಪ್ರಸ್ತುತವಾಗಿವೆ ಎಂದು ಶಾಸಕ ಎನ್.ವೈ. ಗೋಪಾಲಕೃಷ್ಣ ಹೇಳಿದರು.
ಪಟ್ಟಣದ ತಾಲೂಕು ಆಡಳಿತಸೌಧದ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಕನಕ ಜಯಂತ್ಯುತ್ಸವದಲ್ಲಿ ಮಾತನಾಡಿ, ಕೀರ್ತನೆಗಳ ಮೂಲಕ ಸಮಾಜ ಪರಿವರ್ತನೆಯಲ್ಲಿ ಅವರ ಪಾತ್ರ ದೊಡ್ಡದಿದೆ ಎಂದು ಹೇಳಿದರು.
ಶ್ರಮ ಸಂಸ್ಕೃತಿಯ ಪ್ರತಿನಿಧಿಯಾಗಿ ಕರ್ಮಯೋಗದ ಮಹತ್ವವನ್ನು ಜಗತ್ತಿಗೆ ಸಾರಿದ ಹಿರಿಮೆ ಅವರಿಗೆ ಸಲ್ಲುತ್ತುದೆ. ಇಂತಹ ಮಹಾತ್ಮನ ಸ್ಮರಣೆ ಅತ್ಯಂತ ಆದರ್ಶ ಪ್ರಾಯವಾದುದು ಎಂದರು.
ತಹಸೀಲ್ದಾರ್ ಟಿ. ಜಗದೀಶ, ಬಿಇಒ ನಿರ್ಮಲಾದೇವಿ, ಡಾ. ರಂಗಪ್ಪ, ಗುರುಲಿಂಗಪ್ಪ, ಮೂರ್ತಿ, ತಿಪ್ಪೇಸ್ವಾಮಿ, ಬಿ.ಟಿ. ನಾಗಭೂಷಣ, ನಾಗರಾಜ, ಎಸ್. ಖಾದರ್, ಅಂಜಿನಪ್ಪ, ಜಗದೀಶ್, ಮಂಜುನಾಥ, ಮಲ್ಲಿಕಾರ್ಜುನ ಇತರರಿದ್ದರು.