ಕನಕದಾಸರ ಭಾವಚಿತ್ರ ಮೆರವಣಿಗೆ

ಸಿದ್ದಾಪುರದಲ್ಲಿ ಹಾಲುಮತ ಸಮುದಾಯದ ಗೋವಿಂದರಾರಾವಿ ದೇವರ ಪಲ್ಲಕ್ಕಿ ಉತ್ಸವ ನಿಮಿತ್ತ ಕನಕದಾಸರ ಭಾವಚಿತ್ರ ಮೆರವಣಿಗೆ ಮಾಡಲಾಯಿತು. ಪ್ರಮುಖರಾದ ಜನಗಂಡೆಪ್ಪ ಪೂಜಾರ್, ರಾಮಣ್ಣ, ರಾರಾಯಪ್ಪ, ಗೋವಿಂದಪ್ಪ ಇತರರಿದ್ದರು.
ಸಿದ್ದಾಪುರದಲ್ಲಿ ಹಾಲುಮತ ಸಮುದಾಯದ ಗೋವಿಂದರಾರಾವಿ ದೇವರ ಪಲ್ಲಕ್ಕಿ ಉತ್ಸವ ನಿಮಿತ್ತ ಕನಕದಾಸರ ಭಾವಚಿತ್ರ ಮೆರವಣಿಗೆ ಮಾಡಲಾಯಿತು. ಪ್ರಮುಖರಾದ ಜನಗಂಡೆಪ್ಪ ಪೂಜಾರ್, ರಾಮಣ್ಣ, ರಾರಾಯಪ್ಪ, ಗೋವಿಂದಪ್ಪ ಇತರರಿದ್ದರು.
Published on

ಸಿದ್ದಾಪುರ: ಗ್ರಾಮದಲ್ಲಿ ಶನಿವಾರ ಹಾಲುಮತ ಸಮಾಜದಿಂದ ಗೋವಿಂದರಾರಾವಿ ದೇವರ ಪಲ್ಲಕ್ಕಿ ಉತ್ಸವ ಅದ್ದೂರಿಯಾಗಿ ನಡೆಯಿತು. ಬೆಳಗ್ಗೆ ಗೋವಿಂದರಾರಾವಿ ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ ಕಾರ್ಯಗಳು ಜರುಗಿದವು. ಮಹಿಳೆಯರ ಕುಂಭ, ಕಳಸ, ಜನಪದ ವಾದ್ಯಮೇಳದೊಂದಿಗೆ ಗಂಗೆಸ್ಥಳಕ್ಕೆ ತೆರಳಿ ಪೂಜೆ ಸಲ್ಲಿಸಲಾಯಿತು. ನಂತರ ಗ್ರಾಮದ ಪ್ರಮುಖ ಬೀದಿಗಳಲ್ಲಿ ಅಲಂಕರಿಸಿದ ಟ್ರಾೃಕ್ಟರ್‌ನಲ್ಲಿ ಕನಕದಾಸರ ಭಾವಚಿತ್ರ ಮೆರವಣಿಗೆ ಬಳಿಕ ಭಕ್ತರಿಗೆ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಿತು. ಪ್ರಮುಖರಾದ ಜನಗಂಡೆಪ್ಪ ಪೂಜಾರ್, ರಾಮಣ್ಣ, ರಾರಾಯಪ್ಪ, ಗೋವಿಂದಪ್ಪ, ನಾಗರಾಜ, ಸೂರ್ಯಕಾಂತ್ ವಗ್ಗಾರ್, ದುರಗೇಶ್, ಗುರುರಾಜ, ಅಮರೇಶ್, ಹನುಮಂತಪ್ಪ, ಬಸವರಾಜ, ವೀರೇಶ್, ಸುತ್ತಲಿನ ಗ್ರಾಮದ ಭಕ್ತರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net