

ತಂಗಡಗಿ: ಕನಕದಾಸರ ಜಯಂತಿಯನ್ನು ಹಬ್ಬದ ರೂಪದಲ್ಲಿ ಆಚರಿಸಿ ಜನತೆಗೆ ಹೋಳಿಗೆ ಊಟ ಹಾಕಿಸಿದ ಸಂಘಟಕರ ಕಾರ್ಯ ಮಾದರಿಯಾಗಿದೆ. ಕನಕದಾಸರನ್ನು ಒಂದೇ ಜಾತಿ, ಸಮುದಾಯಕ್ಕೆ ಸೀಮಿತಗೊಳಿಸಬಾರದು. ಮಕ್ಕಳು ಕನಕದಾಸರ ತತ್ವಗಳನ್ನು ಪಾಲಿಸುವಂತೆ ನೋಡಿಕೊಳ್ಳಬೇಕು ಎಂದು ತಾಪಂ ಮಾಜಿ ಅಧ್ಯಕ್ಷ ಮುತ್ತಣ್ಣ ಹುಗ್ಗಿ ಹೇಳಿದರು.
ಸಮೀಪದ ಕೃಷ್ಣಾ ತೀರದಲ್ಲಿರುವ ಇತಿಹಾಸ ಪ್ರಸಿದ್ಧ ಅಮರಗೋಳ ಗ್ರಾಮದಲ್ಲಿ ಹಾಲುಮತ ಸಮಾಜದವರ ನೇತೃತ್ವದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸಂತ ಕನಕದಾಸರ 537ನೇ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮುಖಂಡ ಲಕ್ಷ್ಮಣ ಬಿಜ್ಜೂರ ಮಾತನಾಡಿ, ಬಸವಣ್ಣನವರ ಅನುಯಾಯಿಗಳು 777 ಅಮರಗಣಂಗಳು ಈ ಊರಲ್ಲಿ ವಾಸವಿದ್ದುದರಿಂದ ಈ ಊರಿಗೆ ಅಮರಗೋಳ ಎಂದು ಹೆಸರು ಬಂದಿದೆ. ಎಲ್ಲರೂ ಒಗ್ಗಟ್ಟಾಗಿ ಬಾಳುವುದನ್ನು ರೂಢಿಸಿಕೊಳ್ಳಬೇಕು ಎಂದರು.
ಮಲಕೇಂದ್ರಗೌಡ ಪಾಟೀಲ ಅಧ್ಯಕ್ಷತೆ ವಹಿಸಿ ಮಾತನಾಡಿದರು. ದೊಡ್ಡಯ್ಯ ಗುರುಗಳು ಸಾನ್ನಿಧ್ಯ ವಹಿಸಿದ್ದರು.
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಯುವ ಘರ್ಜನೆ ಮುದ್ದೇಬಿಹಾಳ ತಾಲೂಕು ಘಟಕದ ಅಧ್ಯಕ್ಷ ಮುತ್ತು ಟಕ್ಕಳಕಿ, ಶೇಖಪ್ಪ ಅಮರಾವತಿ, ಅಶೋಕ ಬೇನಾಳ, ಗದ್ದೆಪ್ಪ ವಾಲಿಕಾರ, ಸಿ.ಎಸ್.ಬೇನಾಳ, ಎಂ.ಡಿ.ನದಾ, ಮಹಾಂತೇಶ ಕೊಟ್ಟಣ್ಣವರ, ಶಿವು ವಾಲಿಕಾರ, ಶ್ರೀಶೈಲ ಹಡಲಗೇರಿ, ಸಂಗಪ್ಪ ಕವಡಿಮಟ್ಟಿ ಇತರರಿದ್ದರು.
ಎಸ್.ಕೆ.ಹಡಲಗೇರಿ ಕಾರ್ಯಕ್ರಮ ನಿರ್ವಹಿಸಿದರು. ಗ್ರಾಮದ ಕೆಎಸ್‌ಆರ್‌ಟಿಸಿ ಬಳಗ, ಸಮಸ್ತ ಗ್ರಾಮಸ್ಥರು ನೇತೃತ್ವ ವಹಿಸಿದ್ದರು.
ಬೆಳಗ್ಗೆ ಕನಕದಾಸರ ಭಾವಚಿತ್ರವನ್ನು ಕೃಷ್ಣಾನದಿಯ ಗಂಗಸ್ಥಳಕ್ಕೆ ಕರೆದೊಯ್ದು ಅಲ್ಲಿಂದ ಜೋಡೆತ್ತಿನ ಚಕ್ಕಡಿ, ಕುಂಭ-ಕಳಶ ಮೆರವಣಿಗೆ ಮೂಲಕ ಊರೊಳಕ್ಕೆ ಕರೆತರಲಾಯಿತು.
ಗುಂಡಪ್ಪ ಬಡಿಗೇರ ಸಂಗೊಳ್ಳಿ ರಾಯಣ್ಣನ ವೇಷಧಾರಿಯಾಗಿ, ಶೇಖಪ್ಪ ಕವಡಿಮಟ್ಟಿ ಕನಕದಾಸರ ವೇಷಧಾರಿಯಾಗಿ ಮೆರವಣಿಗೆಯಲ್ಲಿ ಗಮನ ಸೆಳೆದರು.