

ತಿಕೋಟಾ: ಭಕ್ತಿ ಪಂಥದ ಮುಖ್ಯ ಹರಿದಾಸರಲ್ಲಿ ಕನಕದಾಸರು ಒಬ್ಬರಾಗಿದ್ದಾರೆ. ದಾಸ ಪರಂಪರೆಯ 250ಕ್ಕೂ ಹೆಚ್ಚು ದಾಸರಲ್ಲಿ ಕನಕದಾಸರು ಪ್ರಸಿದ್ಧರು. ಹಾಗೆಯೇ ಕನ್ನಡ ಭಾಷೆಯ ಪ್ರಸಿದ್ಧ ಕೀರ್ತನೆಕಾರರು ಎಂದು ಉಪನ್ಯಾಸಕ ಡಾ.ರವೀಂದ್ರ ಗೌಡ ಹೇಳಿದರು.
ಪಟ್ಟಣದ ಬಿಎಲ್‌ಡಿಇ ಸಂಸ್ಥೆಯ ನೂತನ ಕಲಾ ಮಹಾವಿದ್ಯಾಲಯದಲ್ಲಿ ಸೋಮವಾರ ಕನಕದಾಸರ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕವಿ ಕನಕದಾಸರು ಸಹಜ ಬದುಕಿನಿಂದ ಕೀರ್ತನಕಾರರಾಗಿ, ಸಂತರಾಗಿ, ದಾರ್ಶನಿಕರಾಗಿ ಕನ್ನಡ ನಾಡಿನ ಪರಂಪರೆಗೆ ಅನನ್ಯ ಕೊಡುಗೆ ನೀಡಿದ್ದಾರೆ ಎಂದರು.
ಪ್ರಾಚಾರ್ಯ ಪ್ರೊ.ಆರ್.ಬಿ.ಸಿರಸಂಗಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪ್ರಾಧ್ಯಾಪಕ ಡಾ.ಎಸ್.ಎನ್.ವಾಗಮಾರೆ, ಡಾ.ಎಂ.ಬಿ.ಹೂಗಾರ, ಪ್ರೊ.ಶಿವಮೂರ್ತಿ ಚಿಕ್ನರ್ತಿ, ಪ್ರೊ.ಎಸ್.ಎಲ್.ರಾಠೋಡ, ಎಸ್.ಪಿ.ಪಾಟೀಲ, ಮಂಜುನಾಥ ಕಾಶೆ, ಸುಶ್ಯಾಂತ ಜವನರ, ಎಲ್.ಬಿ.ದೇಸಾಯಿ, ಸ್ವಪ್ನ ಹಾಲಳ್ಳಿ, ಜಿ.ಎಂ.ಕಾಂಬ್ಳೆ ಇತರರಿದ್ದರು.