ಕನಕದಾಸ ಜಯಂತಿ ಆಚರಣೆಗೆ ಸಿದ್ಧತೆ

Kanakadasaru
Published on

ಮುರಗೋಡ: ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಯುವ ಸಂಘಟನೆ ಹಾಗೂ ಭಕ್ತ ಕನಕದಾಸರ ಜಯಂತಿ ಉತ್ಸವ ಸಮಿತಿ ಸಂಯುಕ್ತಾಶ್ರಯದಲ್ಲಿ ನ.8ರಂದು ಅದ್ದೂರಿ ಕನಕದಾಸ ಜಯಂತ್ಯುತ್ಸವ ಆಚರಿಸಲಾಗುವುದು ಎಂದು ಉಪತಹಸೀಲ್ದಾರ್ ಡಿ.ಬಿ.ಅಲ್ಲಯ್ಯನವರಮಠ ಹೇಳಿದರು.

ಗ್ರಾಮದ ಗ್ರಾಪಂ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಸಮಿತಿ ಕಾರ್ಯದರ್ಶಿ ಮಹೇಶ ಕಿವಡಿ ಮಾತನಾಡಿ, ಕನಕದಾಸರ ಜಯಂತಿ ನಿಮಿತ್ತ ವಿವಿಧ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಕನಕದಾಸರ ರೂಪಕ, ಕೀರ್ತನೆ, ರಂಗೋಲಿ, ವಚನ ಕಂಠ ಪಾಠ ಹಾಗೂ ಪ್ರಬಂಧ ಸ್ಪಧೆ ಆಯೋಜಿಸಲಾಗಿದೆ ಎಂದರು.

ಗ್ರಾಪಂ ಅಧ್ಯಕ್ಷೆ ಸಂಕೇತಾ ಹಟ್ಟಿಹೊಳಿ, ಉಪಾಧ್ಯಕ್ಷೆ ಮಹಾದೇವಿ ಮಬನೂರ, ಸಂಗಪ್ಪ ಬೆಳಗಾವಿ, ಸಂತೋಷ ಶೆಟ್ಟರ, ಶಶಿಧರ ಕುರುಬರ, ಅರುಣ ಬಿಜ್ಜೂರ, ಮಹಾದೇವ ಬೆಳಗಾವಿ, ಶಿವು ಮಿಡಚಿ, ವಿನಯ ಮಾಸ್ತಮರಡಿ, ಶಿವಲಿಂಗ ಕಿತ್ತೂರು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net