ಸಮ ಸಮಾಜಕ್ಕಾಗಿ ಶ್ರಮಿಸಿದ ಕನಕದಾಸ: ಮಾಜಿ ಸಚಿವ ಶಿವರಾಜ ತಂಗಡಗಿ ಹೇಳಿಕೆ

20112022 kanakagiri kanakadas jayanti
Published on

ಕನಕಗಿರಿ: ದಾಸ ಪರಂಪರೆಯಲ್ಲಿ ಭಕ್ತ ಕನಕದಾಸರು ಶ್ರೇಷ್ಠರು. ಅವರು ಒಂದು ಸಮುದಾಯಕ್ಕೆ ಸೀಮಿತರಾದವರಲ್ಲ ಎಂದು ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ, ಮಾಜಿ ಸಚಿವ ಶಿವರಾಜ ತಂಗಡಗಿ ಹೇಳಿದರು.

ಕನಕಾಪುರದಲ್ಲಿ ಭಾನುವಾರ ಏರ್ಪಡಿಸಿದ್ದ ಕನಕದಾಸರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸಮ ಸಮಾಜ ನಿರ್ಮಾಣಕ್ಕಾಗಿ ಕನಕದಾಸರು ಶ್ರಮಿಸಿದರು. ಹಾಲುಮತ ಸಮುದಾಯದವರು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವ ಮೂಲಕ ಉನ್ನತ ಹುದ್ದೆ ಪಡೆಯುವಂತೆ ಪ್ರೇರೇಪಿಸಬೇಕು ಎಂದು ತಿಳಿಸಿದರು.

ಹಾಲುಮತ ಸಮಾಜದ ಮಾಜಿ ಜಿಲ್ಲಾಧ್ಯಕ್ಷ ಸಿದ್ದಪ್ಪ ನೀರಲೂಟಿ ಮಾತನಾಡಿ, ಕನಕದಾಸರ ಕೀರ್ತನೆ, ಸಂದೇಶಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು. ಚುಟುಕು ಸಾಹಿತ್ಯ ಪರಿಷತ್ ಜಿಲ್ಲಾ ಅಧ್ಯಕ್ಷ ಹನುಮಂತಪ್ಪ ಚಿಲವಾಡಗಿ ಮಾತನಾಡಿ, ಕುರುಬರು ಕಂಬಳಿ ಬೀಸಿದರೆ ಮಳೆ ಬರುತ್ತಿತ್ತು. ಅಷ್ಟು ಪವಿತ್ರ ಹಾಲುಮತ ಸಮುದಾಯ. ಸಜ್ಜಲಗುಡ್ಡದ ಶರಣಮ್ಮ, ಇಟಗಿ ಭೀಮಾಂಬಿಕೆ, ಸಂಗೊಳ್ಳಿ ರಾಯಣ್ಣ, ಅಹಲ್ಯಾಬಾಯಿ ಹೋಳ್ಕರ್, ಮಹಾತ್ಮ ಬೊಮ್ಮಗೊಂಡೇಶ್ವರ ಆದರ್ಶಗಳನ್ನು ಎಲ್ಲರೂ ಪಾಲಿಸಬೇಕು ಎಂದರು. ವಕೀಲರ ಸಂಘದ ಮಾಜಿ ಜಿಲ್ಲಾಧ್ಯಕ್ಷ ಹನುಮೇಶ ಮುರುಡಿ, ಜಿಪಂ ಮಾಜಿ ಸದಸ್ಯ ಹನುಮೇಶ ನಾಯಕ, ಬಸಾಪಟ್ಟಣದ ಸಿದ್ದಯ್ಯ ಗುರುವಿನ, ಗ್ರಾಪಂ ಸದಸ್ಯರಾದ ಬಾಳನಗೌಡ ಪೊಲೀಸ್ ಪಾಟೀಲ್, ಕನಕಪ್ಪ ದಂಡಿನ, ಸಣ್ಣ ತೊಂಡೆಪ್ಪ ಬೂದೂರು, ಅಂಬಣ್ಣ ಹಿರಿಯಣ್ಣವರ, ಲಚಮನಗೌಡ ಪಾಟೀಲ್, ಬಸಣ್ಣ ಬುಡ್ಡಣ್ಣನವರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net