ಕನಕ ಜಯಂತಿ ಪೂರ್ವಭಾವಿ ಸಭೆ

21-GPT-3
Published on

ಗುಂಡ್ಲುಪೇಟೆ: ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ಕನಕದಾಸ ಜಯಂತಿ ಆಚರಣೆ ಸಂಬಂಧ ಶಾಸಕ ಎಚ್.ಎಂ.ಗಣೇಶ್‌ಪ್ರಸಾದ್ ಅಧ್ಯಕ್ಷತೆಯಲ್ಲಿ ಮಂಗಳವಾರ ಪೂರ್ವಭಾವಿ ಸಭೆ ನಡೆಯಿತು.

ಸರ್ಕಾರದ ವತಿಯಿಂದ ಕನಕ ಜಯಂತಿ ಆಚರಿಸಲಾಗುವುದು. ಸಮುದಾಯದವರು ಸಹಕರಿಸಿದರೆ ನ.30ರಂದೇ ವಿಜೃಂಭಣೆಯಿಂದ ಆಚರಿಸಲಾಗುವುದು. ಆದರೆ ಸಮುದಾಯದವರು ಜನಾಂಗದ ಸಚಿವರು, ಸ್ವಾಮೀಜಿಗಳನ್ನು ಆಹ್ವಾನಿಸಿ ಬೇರೆ ದಿನಾಂಕ ನಿಗದಿಪಡಿಸಿದರೂ ಎಲ್ಲ ರೀತಿಯ ನೆರವನ್ನೂ ನೀಡಲಾಗುವುದು ಎಂದು ಭರವಸೆ ನೀಡಿದರು.

ಸಭೆಯಲ್ಲಿ ತಹಸೀಲ್ದಾರ್ ರಮೇಶ್‌ಬಾಬು, ಪುರಸಭೆ ಮುಖ್ಯಾಧಿಕಾರಿ ವಸಂತಕುಮಾರಿ, ತಾಪಂ ಮಾಜಿ ಅಧ್ಯಕ್ಷ ಎಚ್.ಎನ್.ಬಸವರಾಜು, ಪುರಸಭೆ ಸದಸ್ಯ ಬಸವರಾಜು, ಮಾಜಿ ಅಧ್ಯಕ್ಷ ಎಲ್.ಸುರೇಶ್, ಮುಖಂಡ ದೊಡ್ಡಣ್ಣ, ಶಿವಣ್ಣ, ಪುಟ್ಟಬುದ್ಧಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net