

ಹುಬ್ಬಳ್ಳಿ: ಕನಕದಾಸರು ಕೇವಲ ಒಬ್ಬ ಕವಿ ಅಥವಾ ಸಂತರು ಮಾತ್ರವಲ್ಲ, ಅವರು ಜಾತ್ಯತೀತ ಮತ್ತು ಭಕ್ತಿಯ ಪ್ರತೀಕ. ಭಕ್ತಿ, ಶಕ್ತಿ, ಯುಕ್ತಿ ಜೀವನದಲ್ಲಿ ಅವಶ್ಯಕವೆಂದು ಸಾರಿದ ಸಂತರು ಎಂದು ಅಖಿಲ ಭಾರತಿ ಸಾಹಿತ್ಯ ಪರಿಷತ್ ಕಾರ್ಯದರ್ಶಿ ಜಯಮೇಜಯ ಉಮರ್ಜಿ ಹೇಳಿದರು.
ಕನಕದಾಸ ಸಮೂಹ ಮಹಾವಿದ್ಯಾಲಯಗಳ ವತಿಯಿಂದ ನಗರದ ಕನಕದಾಸ ಶಿಕ್ಷಣ ಮಹಾವಿದ್ಯಾಲಯದ ಬಿ.ಎಡ್ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ ಭಕ್ತ ಕನಕದಾಸರ ಜಯಂತ್ಯುತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.
ಕನಕದಾಸರು ಸಮಾಜದಲ್ಲಿನ ಜಾತಿ ಸೇರಿದಂತೆ ಅನಿಷ್ಟ ಪದ್ಧತಿಗಳ ವಿರುದ್ಧ ದ್ವನಿ ಎತ್ತಿ ಸಮಾಜದ ಅಂಕುಡೊಂಕುಗಳನ್ನು ತಿದ್ದಿದ ಮಹಾನ್ ದಾರ್ಶನಿಕರು ಎಂದರು.
ಡಾ.ಎಚ್.ವಿ. ಬೆಳಗಲಿ, ಪ್ರೊ. ಸಂದೀಪ ಬೂದಿಹಾಳ ಮಾತನಾಡಿದರು. ಗಾಯತ್ರಿ ಪಾಟೀಲ ಕೀರ್ತನೆ ಹಾಡಿದರು.
ಡಾ.ಎನ್.ಡಿ. ಶೇಖ್, ಡಾ.ಬಿ.ಜಿ. ಮಡ್ಲಿ, ಡಾ. ಶರಣು ಅಣ್ಣಿಗೇರಿ, ಪ್ರೊ. ಬೀರೇಶ ತಿರಕಪ್ಪನವರ, ಇತರರು ಇದ್ದರು.