

ಗುಳೇದಗುಡ್ಡ: ಸಮಾಜದಲ್ಲಿ ಬೇರೂರಿದ್ದ ಜಾತಿ ವ್ಯವಸ್ಥೆ ಹೋಗಲಾಡಿಸಿ ಸಮ ಸಮಾಜ ನಿರ್ಮಾಣದ ಕನಸನ್ನು ಭಕ್ತ ಕನಕದಾಸರು ಕಂಡಿದ್ದರು ಎಂದು ಶಾಸಕ ಭೀಮಸೇನ ಚಿಮ್ಮನಕಟ್ಟಿ ಹೇಳಿದರು.
ಪಟ್ಟಣದ ಹರದೊಳ್ಳಿಯಲ್ಲಿ ತಾಲೂಕು ಹಾಲುಮತ ಸಮಾಜ ಹಮ್ಮಿಕೊಂಡಿದ್ದ ಕನಕದಾಸರ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ನಿಶ್ಚಲ ಭಕ್ತಿ ಮೂಲಕ ಭಗವಂತ ಶ್ರೀಕೃಷ್ಣನನ್ನ್ನು ಒಲಿಸಿಕೊಂಡ ಮಹಾನ್ ಸಂತರಾಗಿದ್ದಾರೆ ಎಂದು ಬಣ್ಣಿಸಿದರು.
ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ, ಸಮಾಜದ ಮುಖ್ಯವಾಹಿನಿಗೆ ಬರುವಂತೆ ಮಾಡಬೇಕು. ಸಮಾಜದ ಅಭಿವೃದ್ಧಿಗೆ ಎಲ್ಲರೂ ಕೈ ಜೋಡಿಸಬೇಕೆಂದರಲ್ಲದೆ, ಹರದೊಳ್ಳಿಯಲ್ಲಿ ಸಮುದಾಯ ಭವನ ನಿರ್ಮಾಣ ಮಾಡಲಾಗುವುದು ಎಂದು ಭರವಸೆ ನೀಡಿದರು.
ಶಿರೂರ ಕನಕ ಬ್ರಹ್ಮ ವಿದ್ಯಾಶ್ರಮದ ಶ್ರೀ ಚಿನ್ಮಯಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ನಾಗರಾಜ ಹೊಟ್ಟಿ ಉಪನ್ಯಾಸ ನೀಡಿದರು.
ತಹಸೀಲ್ದಾರ್ ಮಂಗಳಾ ಎಂ., ಕೃಷಿ ಇಲಾಖೆ ಅಧಿಕಾರಿ ಆನಂದ ಗೌಡರ, ಡಾ. ನಾಗರಾಜ ಕುರಿ, ಪಿಎಸ್‌ಐ ಸಿದ್ದಪ್ಪ ಯಡಹಳ್ಳಿ, ತಾ.ಪಂ. ಇಒ ಸುರೇಶ ಕೊಕಾರ, ಎಂ.ಪಿ. ಮಾಗಿ, ಪುರಸಭೆ ಸದಸ್ಯ ಹನುಮಂತ ಗೌಡರ, ಲಕ್ಷ್ಮ್ಮಣ ಹಾಲನ್ನವರ್, ಮೂಕಪ್ಪ ಹುನ್ನೂರ, ನಿಂಗಪ್ಪ ವಾಲೀಕಾರ, ರಂಗನಾಥ ಮೊಕಾಶಿ, ಬಸವರಾಜ ಕಳ್ಳಿಗುಡ್ಡ, ಹನುಮಂತ ಕಳ್ಳಗುಡ್ಡ, ಯಲಗುರ್ದಪ್ಪ ಗೌಡ್ರ, ರಮೇಶ ಬೂದಿಹಾಳ, ಜಗದೀಶ ಹಿರೇಗೌಡರ, ನೀಲಪ್ಪ ಗೌಡ್ರ ಪಾಲ್ಗೊಂಡಿದ್ದರು.