

ಹುನಗುಂದ: ಕನಕದಾಸ ಸೌಹಾರ್ದ ಪತ್ತಿನ ಸಹಕಾರಿ ಸಂ ಪ್ರಸಕ್ತ ಸಾಲಿನಲ್ಲಿ 25.37 ಲ ರೂ.ನಿವ್ವಳ ಲಾಭ ಗಳಿಸಿದೆ ಎಂದು ಅಧ್ಯ ವೀರೇಶ ಉಂಡೋಡಿ ಹೇಳಿದರು.ಪಟ್ಟಣದ ಕನಕದಾಸ ಸೌಹಾರ್ದ ಪತ್ತಿನ ಸಹಕಾರಿ ಸಂದ ಕಚೇರಿಯಲ್ಲಿ ಹಮ್ಮಿಕೊಂಡಿದ್ದ 2024&25 ನೇ ಸಾಲಿನ ವಾರ್ಷಿಕ ಮಹಾಸಭೆ ಅಧ್ಯತೆ ವಹಿಸಿ ಅವರು ಮಾತನಾಡಿದರು.
ನಮ್ಮ ಸಂವು ಸದ್ಯಕ್ಕೆ 28.87 ಕೋಟಿ ರೂ. ದುಡಿಯುವ ಬಂಡವಾಳ ಹೊಂದಿದೆ. ಕಳೆದ ವರ್ಷ 80 ಕೋಟಿ ರೂ. ಆರ್ಥಿಕ ವ್ಯವಹಾರ ಮಾಡಿದೆ. ಕಳೆದ ವರ್ಷಕ್ಕಿಂತ ಈ ವರ್ಷ 5 ಕೋಟಿ ರೂ. ಡಿಪಾಜಿಟ್ ಹೆಚ್ಚಿಗೆ ಆಗಿದೆ. 16 ವರ್ಷದ ಹಿಂದೆ ನಮ್ಮ ಸಂ 3 ಲ ಷೇರು ಬಂಡವಾಳದಿಂದ ಆರಂಭವಾಗಿ ಇಂದು 28 ಕೋಟಿ ರೂ. ದುಡಿಯುವ ಬಂಡವಾಳ ಹೊಂದಿದೆ. ಬ್ಯಾಂಕ್ ಸ್ವಂತ ಕಟ್ಟಡ ಹೊಂದಿದೆ ಎಂದರು.
ಠೇವಣಿ ಆರ್ಥಿಕ ಭದ್ರತೆ ನೋಡಿಕೊಂಡು ಮುಂದಿನ ದಿನಗಳಲ್ಲಿ ಶಾಖೆಗಳನ್ನು ಆರಂಭಿಸಲಾಗುವುದು. ಸಂದ ಅಭಿವೃದ್ಧಿಗೆ ಎಲ್ಲ ಸದಸ್ಯರು, ನಿರ್ದೇಶಕರು, ಷೇರುದಾರರು, ಸಹಕಾರ ಬ್ಯಾಂಕ್ ಸಿಬ್ಬಂದಿ ಶ್ರಮವೇ ಕಾರಣವಾಗಿದೆ. ಬ್ಯಾಂಕ್ ಅಭಿವೃದ್ಧಿಗೆ ಪ್ರತಿಯೊಬ್ಬರೂ ಕೈ ಜೋಡಿಸಬೇಕು ಎಂದು ಹೇಳಿದರು.
ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಭರಮಣ್ಣ ರಾಮವಾಡಗಿ ಮಾತನಾಡಿ, ಎಲ್ಲ ಸದಸ್ಯರ ಸಹಕಾರದಿಂದಲೇ ನಮ್ಮ ಸಂ ಪ್ರಗತಿ ಹೊಂದಿದೆ ಎಂದರು.
ಉಪಾಧ್ಯಕ್ಷೆ ಅಕ್ಕಮಹಾದೇವಿ ಆಲೂರ, ನಿರ್ದೇಶಕರಾದ ಮಹಾಂತಗೌಡ ಪಾಟೀಲ, ನಾಗಪ್ಪ ಕಳ್ಳಿಗುಡ್ಡ, ನೀಲಪ್ಪ ತಪೇಲಿ, ಸಿದ್ದರಾಮಪ್ಪ ಗೌಡರ, ವಿಠ್ಠಲ ತಿಮ್ಮಾಪೂರ, ಮಹಾಂತೇಶ ಮುಕ್ಕಣ್ಣವರ, ಸಂಗಪ್ಪ ಚಿತ್ತವಾಡಗಿ, ಮಲ್ಲಿಕಾರ್ಜುನ ಡಂಬಳ, ಲಕ್ಷಿ$್ಮಭಾವಿ ವಾಲೀಕಾರ ಇದ್ದರು.
ಹುನಗುಂದ ಕನಕದಾಸ ಸೌಹಾರ್ದ ಪತ್ತಿನ ಸಹಕಾರಿ ಕಚೇರಿಯಲ್ಲಿ ಹಮ್ಮಿಕೊಂಡ ಸಭೆಯಲ್ಲಿ ಸಂದ ಅಧ್ಯ ವೀರೇಶ ಉಂಡೋಡಿ ಮಾತನಾಡಿದರು. ಉಪಾಧ್ಯಕ್ಷೆ ಅಕ್ಕಮಹಾದೇವಿ ಆಲೂರ, ನಿರ್ದೇಶಕರಾದ ಮಹಾಂತಗೌಡ ಪಾಟೀಲ, ನಾಗಪ್ಪ ಕಳ್ಳಿಗುಡ್ಡ, ನೀಲಪ್ಪ ತಪೇಲಿ, ಸಿದ್ದರಾಮಪ್ಪ ಗೌಡರ, ವಿಠ್ಠಲ ತಿಮ್ಮಾಪೂರ ಇದ್ದರು.