ಕನಕಾಚಲ ಲಕ್ಷ್ಮೀನರಸಿಂಹ ಮೂರ್ತಿ ಪ್ರತಿಷ್ಠಾಪನೆ ನಾಳೆ

Published on

ಅಳವಂಡಿ: ಸಮೀಪದ ಬೆಳಗಟ್ಟಿ ಗ್ರಾಮದಲ್ಲಿ ಆ.20 ರಿಂದ 22 ರವರೆಗೆ ಶ್ರೀ ಕನಕಾಚಲ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನ ಲೋಕಾರ್ಪಣೆ ಹಾಗೂ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮ ಆಯೋಜಿಸಲಾಗಿದೆ.

ಬುಧವಾರ ಬೆಳಗ್ಗೆ ಪೂರ್ಣಕುಂಭ ಹಾಗೂ ದಾವಣಗೆರೆ ಕಲಾ ಬಳಗದ ನಂದಿಕೋಲು ಹಾಗೂ ಡೊಳ್ಳು ಮೇಳದೊಂದಿಗೆ ಮೆರವಣಿಗೆ ಮಾಡಲಾಗುವುದು. ನಂತರ ದೇವರ ಮೂರ್ತಿಗೆ ಕಂಕಣ ಧಾರಣೆ, ಜಲಾವಾಸ, ಮಹಾಪ್ರಸಾದ ನೆರವೇರಿಸಲಾಗುವುದು. ಆ.21ರ ಬೆಳಗ್ಗೆ ಮೂರ್ತಿಗೆ ದಾನ್ಯದಿವಾಸ, ಪುಣ್ಯಾರ್ಚನೆ, ಗಣಪತಿ ಪೂಜೆ, ವಾಸ್ತುಶಾಂತಿ, ನವಗ್ರಹ ಪ್ರತಿಷ್ಠಾಪನೆ ಹೋಮ ನಡೆಯಲಿದೆ. ಮಧ್ಯಾಹ್ನ ತುಲಾ ಲಗ್ನದಲ್ಲಿ ವಿವಿಧ ಪೂಜಾ ಕೈಂಕರ್ಯದೊಂದಿಗೆ ಮೂರ್ತಿ ಪ್ರತಿಷ್ಠಾಪನೆ ಹಾಗೂ ದೇವಸ್ಥಾನ ಲೋಕಾರ್ಪಣೆ ನೆರವೇರಲಿದೆ. ನಂತರ ಅಲಂಕಾರ, ಮಹಾಮಂಗಳಾರತಿ ಮತ್ತು ಅನ್ನಸಂತರ್ಪಣೆ ನಡೆಯಲಿದೆ.

ಆ.22ರ ಬೆಳಗ್ಗೆ ಅಷ್ಟಾಂಗಸ್ನಾನ, ರುದ್ರಾಭಿಷೇಕ, ಅಲಂಕಾರ, ಮಹಾಮಂಗಳಾರತಿ, ಅನ್ನಸಂತರ್ಪಣೆ ನೆರವೇರಲಿದೆ. ಸಂಜೆ ಕಲಕೇರಿ-ವಿರುಪಾಪೂರ ಶ್ರೀ ಮುದುಕೇಶ್ವರ ಶಿವಾಚಾರ್ಯರು, ಅಳವಂಡಿಯ ಶ್ರೀ ಮರುಳಾರಾಧ್ಯ ಶಿವಾಚಾರ್ಯರು, ಮೈನಳ್ಳಿ-ಬಿಕನಳ್ಳಿಯ ಶ್ರೀ ಸಿದ್ದೇಶ್ವರ ಶಿವಾಚಾರ್ಯರು, ಬೆಳಗಟ್ಟಿಯ ಹಜರತ್ ಸೈಯದ್ ಶಾ ಮೆಹಬೂಬ್ ಖಾದ್ರಿ ಗುರುಗಳು ಹಾಗೂ ಶ್ರೀ ಚೌಕಿಮಠದ ಗಾಡಿತಾತ ಸ್ವಾಮೀಜಿ ಸಾನ್ನಿಧ್ಯದಲ್ಲಿ ಧರ್ಮಸಭೆ ನಡೆಯಲಿದೆ. ನಂತರ ದಾನಿಗಳಿಗೆ ಸನ್ಮಾನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net