ಕನಕಾಚಲ ಲಕ್ಷ್ಮೀ ನರಸಿಂಹ ಮೂರ್ತಿ ಪ್ರತಿಷ್ಠಾಪನೆ ಇಂದು

20ALD08
ಬೆಳಗಟ್ಟಿಯ ಕನಕಾಚಲ ಲಕ್ಷ್ಮೀ ನರಸಿಂಹ ದೇವಸ್ಥಾನವನ್ನು ಮೂರ್ತಿ ಪ್ರತಿಷ್ಟಾಪನೆ ಅಂಗವಾಗಿ ಅಲಂಕರಿಸಲಾಗಿತ್ತು.
Published on

ಅಳವಂಡಿ: ಸಮೀಪದ ಬೆಳಗಟ್ಟಿ ಗ್ರಾಮದ ಶ್ರೀ ಕನಕಾಚಲ ಲಕ್ಷ್ಮೀ ನರಸಿಂಹ ದೇವಸ್ಥಾನ ಉದ್ಘಾಟನೆ, ಮೂರ್ತಿ ಪ್ರತಿಷ್ಟಾಪನೆ ಗುರುವಾರ ನಡೆಯಲಿದೆ. ಬೆಳಗ್ಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗುವವು. ಮಧ್ಯಾಹ್ನ ತುಲಾ ಲಗ್ನ ಮೂಹುರ್ತದಲ್ಲಿ ಪೂಜೆಗಳೊಂದಿಗೆ ಮೂರ್ತಿ ಪ್ರತಿಷ್ಟಾಪಿಸಲಾಗುವುದು.

ಆ.22ಬೆಳಗ್ಗೆ ಮೂರ್ತಿಗೆ, ರುದ್ರಾಭಿಷೇಕ, ಮಹಾಮಂಗಳಾರತಿ, ಅಷ್ಟಾಂಗಸ್ನಾನ ಇತರ ಧಾರ್ಮಿಕ ಕಾರ್ಯಗಳು ಜರುಗಲಿವೆ. ನಂತರ ಅನ್ನ ಸಂತರ್ಪಣೆ ಹಾಗೂ ಧಾರ್ಮಿಕ ಸಭೆ ನಡೆಯಲಿದೆ. ಶ್ರೀ ಮುದುಕೇಶ್ವರ ಶಿವಾಚಾರ್ಯ, ಶ್ರೀ ಮರುಳಾರಾದ್ಯ ಶಿವಾಚಾರ್ಯ, ಶ್ರೀ ಸಿದ್ದೇಶ್ವರ ಶಿವಾಚಾರ್ಯ, ಸೈಯದ್ ಶಾ ಮೆಹಬೂಬ ಖಾದ್ರಿ ಗುರುಗಳು, ಚೌಕಿಮಠದ ಗಾಡಿತಾತಾ ಸ್ವಾಮೀಜಿ ಇತರ ಮೂಖಂಡರು ಭಾಗವಹಿಸಲಿದ್ದಾರೆ, ನಂತರ ದಾನಿಗಳಿಗೆ ಸನ್ಮಾನ, ಸಾಂಸ್ಕೃತಿ ಕಾರ್ಯಕ್ರಮ ನಡೆಯಲಿವೆ.

ಗ್ರಾಮದ ಮುಖಂಡ ಬೆಳಗಟ್ಟಿ,ಹೊನ್ನಪ್ಪಗೌಡ ಪಾಟೀಲಕನಕಾಚಲ ಲಕ್ಷ್ಮೀ ನರಸಿಂಹ ದೇವರ ಕಾರ್ಯಕ್ರಮ ಸರ್ವಧರ್ಮದವರು ಸೇರಿ ಭಾವೈಕ್ಯತೆಯಿಂದ ಅದ್ದೂರಿಯಾಗಿ ಆಚರಿಸುತ್ತೇವೆ. ಬೇಧ, ಭಾವವಿಲ್ಲದೇ ಸಂಭ್ರಮದಿಂದ ಆಚರಿಸುತ್ತೇವೆ, ಗ್ರಾಮಸ್ಥ ಬೆಳಗಟ್ಟಿ.ಖಾದರಸಾಬ ಆಲೂರುಬೆಳಗಟ್ಟಿಯಲ್ಲಿ ಸರ್ವ ಧರ್ಮದವರು ಜಾತ್ಯಾತೀತ ಮನೋಭಾವದಿಂದ ಹಬ್ಬ ಆಚರಿಸುತ್ತಾರೆ. ಹಬ್ಬಗಳು ಜನರ ಮನಸ್ಸನ್ನು ಹತ್ತಿರ ತರುವ ಕೆಲಸ ಮಾಡುತ್ತವೆ. ಹಬ್ಬದ ಸಂಭ್ರಮ ಗ್ರಾಮದಲ್ಲಿ ಮನೆ ಮಾಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net