ಕನಕ ಮಾರ್ಗ ಚಲನಚಿತ್ರ ಪ್ರದರ್ಶನ

kanakadasa
Published on

ಮೈಸೂರು: ಕನಕ ಶಕ್ತಿ ಮಹಿಳಾ ಕ್ಷೇಮಾಭಿವೃದ್ಧಿ ಸಂಘ ಹಾಗೂ ಇನ್ನಿತರ ಸಂಘ ಸಂಸ್ಥೆಗಳ ಸಹಯೋಗದಲ್ಲಿ ನ.24ರಂದು ಸಂಜೆ 4 ಗಂಟೆಗೆ ನಗರದ ಮಹಾರಾಜ ಕಾಲೇಜು ಶತಮಾನೋತ್ಸವ ಭವನದಲ್ಲಿ ಕನಕ ಮಾರ್ಗ ಚಲನಚಿತ್ರ ಪ್ರದರ್ಶನ ಆಯೋಜಿಸಲಾಗಿದೆ ಎಂದು ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಕೆ.ಬಿ.ಸೋಮೇಗೌಡ ತಿಳಿಸಿದರು.


ಚಲನಚಿತ್ರ ಸುಮಾರು ಎರಡೂವರೆ ಗಂಟೆ ಅವಧಿಯದ್ದಾಗಿದ್ದು, ಎಲ್ಲರಿಗೂ ಉಚಿತ ಪ್ರವೇಶವಿದೆ. ಕುಟುಂಬ ಸಮೇತ ನೋಡುವ ಚಿತ್ರವಾಗಿದ್ದು, ಮನಮುಟ್ಟುವ ಮತ್ತು ಅರ್ಥಗರ್ಭಿತವಾದುದಾಗಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು. ಬೆಂಗಳೂರು ಚಲನಚಿತ್ರೋತ್ಸವ ಹಾಗೂ ದಸರಾ ಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡಿದೆ. ಪಠ್ಯದಲ್ಲಷ್ಟೇ ಕನಕರ ಬಗ್ಗೆ ತಿಳಿಯುವ ಮಕ್ಕಳಿಗೆ ಈ ಚಲನಚಿತ್ರ ಅವರ ಬಗ್ಗೆ ಅರಿವು ಮೂಡಿಸುಂತದ್ದಾಗಿದ್ದು, ಎಲ್ಲ ಶಾಲೆಗಳಲ್ಲಿ ಪ್ರದರ್ಶಿಸುವ ಉದ್ದೇಶವಿದೆ ಎಂದರು.


ನಿರ್ಮಾಪಕ ವಿಶಾಲ್‌ರಾಜ್, ಮುಖಂಡರಾದ ಕೆಂಪೇಗೌಡ, ಸಿದ್ದರಾಮೇಗೌಡ, ಕಮಲಾ, ಜವರೇಗೌಡ, ಶಿವರುದ್ರಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net