

ಚಿತ್ರದುರ್ಗ: ನಗರದ ತರಾಸು ರಂಗಮಂದಿರದಲ್ಲಿ ನ.11ರಂದು ಮಧ್ಯಾಹ್ನ 12.30ಕ್ಕೆ ಅದ್ಧೂರಿಯಾಗಿ ಕನಕ ಜಯಂತಿ ಆಚರಿಸಲು ಜಿಲ್ಲಾಧಿಕಾರಿ ಅಧ್ಯಕ್ಷತೆಯ ಸಭೆ ತೀರ್ಮಾನಿಸಿತು. ಡಿಸಿ ಕಚೇರಿಯಲ್ಲಿ ಶನಿವಾರ ಜಿಲ್ಲಾಧಿಕಾರಿ ಜಿಆರ್‌ಜೆ ದಿವ್ಯಾಪ್ರಭು ಜಿ.ಆರ್.ಜೆ ಅಧ್ಯಕ್ಷತೆ ನಡೆದ ಪೂರ್ವಭಾವಿ ಸಭೆಯಲ್ಲಿ ಈ ಕುರಿತು ಚರ್ಚಿಸಲಾಯಿತು.
ಜಿಲ್ಲಾಡಳಿತ,ಜಿಪಂ,ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ನಗರಸಭೆಯಿಂದ ಭಕ್ತ ಶ್ರೇಷ್ಠ ಕನಕದಾಸರ ಜಯಂತಿ ಆಚರಿಸ ಲಾ ಗುವುದು. ಅಂದು ಬೆಳಗ್ಗೆ 9.30ಕ್ಕೆ ನಗರದ ಹೊಳಲ್ಕೆರೆ ರಸ್ತೆಯ ಕನಕದಾಸರ ಪ್ರತಿಮೆಯಿಂದ ತರಾಸು ರಂಗಮಂದಿರದವರೆಗೆ ನಡೆಯ ಲಿದೆ. ಕನಕದಾಸರ ಪುತ್ಥಳಿಗೆ ಜಿಲ್ಲಾಧಿಕಾರಿ ಮಾಲಾರ್ಪಣೆ ಮಾಡಿದ ನಂತರ ವಿವಿಧ ಜಾನಪದ ಕಲಾತಂಡಗಳೊಂದಿಗೆ ಕನಕದಾಸರ ಭಾವ ಚಿತ್ರ ಮೆರವಣಿಗೆಗೆ ಚಾಲನೆ ಸಿಗಲಿದೆ.
ಡಿಸಿ ಮಾತನಾಡಿ,ಕನಕ ಜಯಂತಿ ಅರ್ಥಪೂರ್ಣವಾಗಿ ಆಚರಿಸಲು ಅಗತ್ಯ ಸಿದ್ಧತೆಗಳಿಗೆ ಅಧಿಕಾರಿಗಳಿಗೆ ಸೂಚಿಸಿದರು. ಜಯಂತಿ ಆಚರಣೆ ಸಂಬಂಧ ಸಮುದಾಯ ಮುಖಂಡರು ಅಗತ್ಯ ಸಲಹೆ ಸೂಚನೆ ನೀಡಬೇಕೆಂದರು. ಎಡಿಸಿ ಇ.ಬಾಲಕೃಷ್ಣ ಮಾತನಾಡಿ, ಕನಕ ಜಯಂತಿ ಅಂಗವಾಗಿ ಕನಕ ಪುತ್ಥಳಿ ಸೇರಿದಂತೆ ನಗರದಲ್ಲಿರುವ ಎಲ್ಲ ಮಹನೀಯರ ಪ್ರತಿಮೆಗಳಿಗೆ ಅಲಂಕಾರ ಮಾಡುವಂತೆ ನಗರಸಭೆ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಮಲ್ಲಿಕಾರ್ಜುನ್ ಮಾತನಾಡಿ,ಶಿಷ್ಟಾಚಾರದ ಅನುಸಾರ ಜಯಂತಿ ಆಚರಿಸ ಲಾಗುವುದು. ಆಹ್ವಾನದ ಪತ್ರಿಕೆಯಲ್ಲಿ ಸಮಾಜದ ಅಧ್ಯಕ್ಷರು ಹಾಗೂ ಕಾರ್ಯದರ್ಶಿ ಅವರ ಹೆಸರು ಮುದ್ರಿಸಲಾಗುವುದು ಎಂದರು.
ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಎಸ್.ಶ್ರೀರಾಮ್ ಮಾತನಾಡಿ,ಕೋವಿಡ್ ಸಾಂಕ್ರಾಮಿಕ ರೋಗದಿಂದಾಗಿ ಕಳೆದ ಎರಡು ವರ್ಷಗಳಿಂದ ಕನಕ ಜಯಂತಿಯನ್ನು ಬಹಳ ಸರಳವಾಗಿ ಆಚರಿಸಲಾಗಿತ್ತು. ಈ ಬಾರಿ ವಿಜೃಂಭಣೆಯಿಂದ ಆಚರಿಸಬೇಕಿದೆ. ಜಯಂತಿಗೆ ಸಮಾಜದ ಗುರುಗಳನ್ನು ಆಹ್ವಾನಿಸಲಾಗುವುದು. ಕನಕ ದಾಸರ ಕುರಿತು ಉಪನ್ಯಾಸವಿರುತ್ತದೆ ಎಂದರು.
ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಬಿ.ಟಿ.ಜಗದೀಶ್,ಸಮಾರಂಭದಲ್ಲಿ ಸಮುದಾಯದ ಏಳಿಗೆಗಾಗಿ ಶ್ರಮಿಸಿದ ಸಮಾಜದ ಐವರು ಗಣ್ಯರು,ಹಿರಿಯರನ್ನು ಗುರುತಿಸಿ ಸನ್ಮಾನಿಸಲಾಗುವುದು ಎಂದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಕನಕದಾಸರ ಜೀವನಚರಿತ್ರೆ ಹಾಗೂ ಕೀರ್ತನೆಗಳನ್ನು ಒಳಗೊಂಡ ಕೈಪಿಡಿ ವಿತರಿಸಬೇಕು ಹಾಗೂ ಎಲ್ಲ ಸರ್ಕಾರಿ ನೌಕರರು ಜಯಂತಿ ಕಾರ್ಯ ಕ್ರಮದಲ್ಲಿ ಕಡ್ಡಾಯವಾಗಿ ಭಾಗವಹಿಸಬೇಕು. ಶಾಲೆಗಳಲ್ಲಿಯೂ ಜಯಂತಿ ಆಚರಿಸಿ,ಕನಕದಾಸರ ಕೀರ್ತನೆಗಳ ಬಗ್ಗೆ ತಿಳಿಸುವ ಕೆಲಸ ವಾಗಬೇಕೆಂದರು.
ಎಎಸ್‌ಪಿ ಕುಮಾರಸ್ವಾಮಿ,ಆಹಾರ ಇಲಾಖೆ ಜಂಟಿ ನಿರ್ದೇಶಕ ಮಧುಸೂಧನ್,ಡಿಡಿಪಿಐ ರವಿಶಂಕರ್‌ರೆಡ್ಡಿ,ಜಿಲ್ಲಾ ಕುರುಬರ ಸಂಘದ ಕಾರ್ಯದರ್ಶಿ ಬಿ.ಎಚ್.ಗೌಡ,ಸಮಾಜದ ಮುಖಂಡರಾದ ಮಂಜುನಾಥ್,ಮಲ್ಲಿಕಾರ್ಜುನ್,ಲೋಕೇಶ್ವರಪ್ಪ,ಪೈಲ್ವಾನ್ ತಿಪ್ಪೇಸ್ವಾಮಿ, ಆರ್.ಮೃತ್ಯಂಜಯ,ಮುತ್ತುರಾಜ್,ಶಿವರಾಂ,ಜಯಶಂಕರ್,ಎಸ್.ಆರ್.ಲೇಪಾಕ್ಷ,ಎನ್.ಮಧು,ಸಾಹಿತಿ ಜಗನ್ನಾಥ್, ತಿಪ್ಪೇಸ್ವಾಮಿ ಮತ್ತಿತರರು ಇದ್ದರು.