

ಹುಬ್ಬಳ್ಳಿ: ಇಲ್ಲಿಯ ಬಿಜೆಪಿ ಕಚೇರಿಯಲ್ಲಿ ಹು-ಧಾ ಮಹಾನಗರ ಜಿಲ್ಲಾ ಹಿಂದುಳಿದ ವರ್ಗ ಮೋರ್ಚಾ ವತಿಯಿಂದ ಸಂತ ಕನಕದಾಸರ ಜಯಂತಿಯನ್ನು ಶನಿವಾರ ಆಚರಿಸಲಾಯಿತು. ಒಬಿಸಿ ಜಿಲ್ಲಾಧ್ಯಕ್ಷ ಪ್ರವೀಣ ಹರಳಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಸಂತ ನಾಡಜೋಶಿ, ಮಂಡಲ ಅಧ್ಯಕ್ಷ ರಾಜು ಕಾಳೆ, ಜಿಲ್ಲಾ ಒಬಿಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಡಾ.ರವೀಂದ್ರ ಯಲ್ಕಾನ, ಪಾಲಿಕೆ ಸದಸ್ಯರಾದ ಬೀರಪ್ಪ ಖಂಡೇಕರ, ಪ್ರವೀಣ ಪವಾರ, ಮಂಜುನಾಥ ಚಿತ್ತಗಿಂಜಲ, ರಾಜು ಜರತಾಘರ, ಇಂದಿರಾ ಚವ್ಹಾಣ, ದೇವಕ್ಕ ಬಡಿಗೇರ, ಕಿರಣ ನಸಬಿ ಇತರರು ಭಾಗವಹಿಸಿದ್ದರು.