

ಮೈಸೂರು: ತಾಲೂಕಿನ ಕೀಳನಪುರ ಸರ್ಕಾರಿ ಶಾಲೆಯಲ್ಲಿ ಶುಕ್ರವಾರ ಕನಕದಾಸರ ಜಯಂತಿ ಆಚರಿಸಲಾಯಿತು.
ಮುಖ್ಯ ಶಿಕ್ಷಕ ಮಾಲಂಗಿ ಸುರೇಶ್ ಮಾತನಾಡಿ, ಕನಕದಾಸರು ಸಮಾಜದಲ್ಲಿನ ಜಾತೀಯತೆ ಹೋಗಲಾಡಿಸಲು ಕೀರ್ತನೆಗಳನ್ನು ರಚಿಸಿದರು. ಶ್ರೀ ಕೃಷ್ಣನನ್ನೇ ಒಲಿಸಿಕೊಂಡು ದರ್ಶನ ಪಡೆದ ಕನಕದಾಸರು, ದೇಶದ ಸಂಸ್ಕೃತಿ ಮತ್ತು ಶ್ರೀಮಂತಿಕೆಯನ್ನು ವಿಶ್ವಕ್ಕೆ ಸಾರಿದರು ಎಂದು ಅಭಿಪ್ರಾಯಪಟ್ಟರು.
ಶಿಕ್ಷಕರಾದ ಮಂಜುಳಾ, ತಸ್ಮೀನ ಬಾನು, ಪಾಕಿಎಮ್ಮಾಳ , ಎಸ್‌ಡಿಎಂಸಿ ಅಧ್ಯಕ್ಷ ಮಲ್ಲು, ಗ್ರಾಪಂ ಸದಸ್ಯ ನಾಗರಾಜು, ಮುಖಂಡ ಸ್ವಾಮಿ ಹಾಜರಿದ್ದರು.