

ವಿಜಯವಾಣಿ ಸುದ್ದಿಜಾಲ ಗದಗ
ಪ್ರಜಾಪ್ರಭುತ್ವದಲ್ಲಿ ಸಂವಿಧಾನ ಮಹತ್ವ ರ್ಪೂಣವಾದ ಹಕ್ಕನ್ನು ಹೊಂದಿದ ವ್ಯವಸ್ಥೆಯಾಗಿದೆ. ಇದರಿಂದ ಸರ್ವರಿಗೂ ಸಮ ಸಮಾಜ ನಿಮಿರ್ಸುವಲ್ಲಿ ಸಂವಿಧಾನ ಒಂದು ಸಾಧನವಾಗಿದೆ ಎಂದು ಹಿರಿಯ ವಕೀಲ ಎಂ. ಎಂ. ಹಿರೇಮಠ ಹೇಳಿದರು.
ನಗರದ ವಿಜಯ ಲಲಿತ ಕಲಾ ಕಾಲೇಜಿನಲ್ಲಿ ಏರ್ಪಡಿಸಿದ್ದ ಎಲೆಕ್ಟ್ರಾಲ್ ಲಿಟ್ರೆಸಿ ಕ್ಲಬ್ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಚುನಾವಣೆಯ ಮೂಲಕ ಉತ್ತಮ ಪ್ರತಿನಿಧಿಯನ್ನು ಆಯ್ಕೆ ಮಾಡುವ ಹಕ್ಕು ನಮ್ಮ ಕೈಯಲ್ಲಿದೆ. ಮತದಾನವನ್ನು ಯಾರು ನಿಷ್ಕಾಳಜಿ ಮಾಡಬಾರದು. 18 ವರ್ಷ ವರ್ಷದಲ್ಲಿರುವ ವಯಸ್ಕರರು ತಕ್ಷಣವೇ ಮತದಾನದ ಹಕ್ಕನ್ನು ಪಡೆಯಬೇಕು. ಮತದಾನದ ಹಕ್ಕನ್ನು ಪಡೆಯದೇ ನಿಷ್ಕಾಳಜಿ ವಹಿಸಿದರೇ ನಿವೋಬ್ಬ ಪ್ರಜೆಯಾಗಿ ಸಮಾಜ ಸಂವರ್ಧನೆಗೆ ಕುಂಠಿತವಾಗುತ್ತದೆ. ಆದ್ದರಿಂದ ತಪ್ಪದೇ ನೋಂದಣಿ ಕಾರ್ಯ ಮಾಡಿಸಬೇಕು ಎಂದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾ ಡಾ. ಭಾರತಿ ಬ್ಯಾಳಿ ಚುನಾವಣೆ ಮತ್ತು ಮತದಾನದ ಮಹತ್ವ ಮಾತನಾಡಿದರು. ಪ್ರೊ. ಸಂತೋಷ ಅಕ್ಕಿ, ಸಾಗರಿಕಾ ಅಕ್ಕಿ, ಶ್ರೀದೇವಿ ಯರಗಂಬಳಿಮಠ, ಡಾ. ಸಿ. ವಿ. ಬಡಿಗೇರ, ಪ್ರೊ. ಬಸವರಾಜ ನೆಲಜೇರಿ, ಗಣೇಶ ಚಲವಾದಿ ಹಲವರು ಇದ್ದರು.