ಮಹಾನ್ ವ್ಯಕ್ತಿಗಳ ಸಾಧನೆ ಸ್ಮರಿಸಿ

1ark-1
Published on

ಅರಕಲಗೂಡು: ಮನುಕುಲದ ಉದ್ಧಾರಕ್ಕಾಗಿ ಶ್ರಮಿಸಿದ ಮಹಾನ್ ವ್ಯಕ್ತಿಗಳ ಸಾಧನೆಗಳನ್ನು ಸ್ಮರಿಸಿಕೊಂಡು ಸಮಾಜದ ಉನ್ನತಿಗೆ ಕೈಜೋಡಿಸೋಣ ಎಂದು ಸಮಾಜ ಸೇವಕ ಸಿ.ಡಿ. ದಿವಾಕರಗೌಡ ಹೇಳಿದರು. ರಾಮನಾಥಪುರದ ಕೂಡಲೂರು ಸರ್ಕಲ್‌ನಲ್ಲಿ ಗುರುವಾರ ಸಂಜೆ ಕನಕದಾಸರ ಪುತ್ಥಳಿ ಅನಾವರಣ ಮತ್ತು ಕನಕ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಹನೀಯರನ್ನು ಒಂದು ಸಮುದಾಯಕ್ಕೆ ಸೀಮಿತಗೊಳಿಸುವ ಮನಸ್ಥಿತಿ ಯಾರಲ್ಲೂ ಇರಬಾರದು. ಜನ ಸಮುದಾಯಕ್ಕೆ ದೊಡ್ಡ ಕೊಡುಗೆ ನೀಡಿದ ಮಹನೀಯರ ಹೆಸರನ್ನು ಚಿರಸ್ಥಾಯಿಯಾಗಿ ಉಳಿಸುವ ಸಲುವಾಗಿ ಅನೇಕ ಕಡೆ ಪುತ್ಥಳಿಗಳನ್ನು ಸ್ಥಾಪಿಸಿ ಗೌರವಿಸುವುದು ಉತ್ತಮ ಕಾರ್ಯ ಎಂದರು.
ಯುವ ಸಮುದಾಯ ಸಾಧಕರ ಸಾಧನೆಗಳು ವಿಚಾರಧಾರೆಗಳನ್ನು ಮುಂದಿಟ್ಟುಕೊಂಡು ಬೆಳೆಯಬೇಕು. ಆಗ ಮಾತ್ರ ಸಮಾಜ ನಮ್ಮನ್ನು ಗುರುತಿಸುತ್ತದೆ ಎಂದರು. ಮುಖಂಡರಾದ ಅನಿಲ್ ಕುಮಾರ್, ಪ್ರಸನ್ನ ಕುಮಾರ್, ಮುತ್ತಿಗೆ ರಮೇಶ್, ರಾಮೇಗೌಡ, ಕೃಷ್ಣೇಗೌಡ, ಮೊಗಣ್ಣಗೌಡ, ಶಿವಪ್ಪ, ಡಾ. ದಿವ್ಯಾ ಇತರರಿದ್ದರು. ಕನಕದಾಸರ ಪುತ್ಥಳಿ ದಾನಿ ಸಿ.ಡಿ. ದಿವಾಕರಗೌಡರನ್ನು ಸನ್ಮಾನಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net