ಜೆಎಸ್ಎಸ್ ಸ್ಕೂಲ್ ನಲ್ಲಿ ಕನಕ ಜಯಂತಿ

IMG-20251108-WA0012-1.jpg
Published on

ಹುಬ್ಬಳ್ಳಿ: ಇಲ್ಲಿಯ ಉಣಕಲ್ಲ ಜೆಎಸ್ಎಸ್ ಶ್ರೀ ಮಂಜುನಾಥೇಶ್ವರ ಸೆಂಟ್ರಲ್ ಸ್ಕೂಲ್ ನಲ್ಲಿ ಶನಿವಾರ ಕನಕದಾಸರ ಜಯಂತಿಯನ್ನು ಸಂಭ್ರಮದಿಂದ ಆಚರಿಸಲಾಯಿತು.

ಪ್ರಾಚಾರ್ಯ ರಜನಿ ಪಾಟೀಲ ಕನಕದಾಸರ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಿ ಗೌರವ ಸಲ್ಲಿಸಿದರು. ಕನಕದಾಸರ ಸಾಮಾಜಿಕ ಕಳಕಳಿ, ಹರಿಭಕ್ತಿ, ಜನರಿಗೆ ನೀಡಿದ ಸಂದೇಶಗಳು ಎಲ್ಲ ಕಾಲಕ್ಕೂ ಸ್ಪೂರ್ತಿದಾಯಕ ಎಂದರು.

ಪ್ರಾರ್ಥನಾ ಗೀತೆ ಹಾಗೂ ಕನಕದಾಸರ ಕೀರ್ತನೆಗಳನ್ನು ಹಾಡಲಾಯಿತು. ಕನಕದಾಸರ ವೇಷಭೂಷಣಗಳನ್ನು ತೊಟ್ಟು ಮಕ್ಕಳು ರಂಜಿಸಿದರು. ವಿದ್ಯಾರ್ಥಿ ಪಂಚುಲ್ ಛಬ್ಬಿ ಕನಕದಾಸರ ವೇಷ ಧರಿಸಿ ಅವರ ಕೀರ್ತನೆಯ ಸಾರಾಂಶ ಹೇಳಿ ಗಮನ ಸೆಳೆದನು. ಸಂಗೀತ ಶಿಕ್ಷಕಿ ಪಲ್ಲವಿ ಖಾನಪೇಟ ಕೀರ್ತನೆಗಳನ್ನು ಹಾಡಿದರು.

ಸಹ-ಸಂಯೋಜಕ ಯಶಸ್ವಿನಿ ನಾಯಕ್ ಕಾರ್ಯಕ್ರಮ ನಿರ್ವಹಿಸಿದರು. ಶಿಕ್ಷಕಿ ದೀಪಾ ಬೋರಟ್ಟಿ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ವಿದ್ಯಾ ಸ್ವಾಗತಿಸಿದರು. ಶಿಕ್ಷಕಿ ಸವಿತಾ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net