ಗುರುವಿನ ಅನುಗ್ರಹವಿದ್ದರೆ ಸಾಧನೆ ಮಾಡಲು ಸಾಧ್ಯ

Ujjini sri
ಜಗದ್ಗುರು ಸಿದ್ಧಲಿಂಗ ಶಿವಾಚಾರ್ಯರು.
Published on


ಜಗದ್ಗುರು ಸಿದ್ಧಲಿಂಗ ಶಿವಾಚಾರ್ಯರು.

ಕಾನಹೊಸಹಳ್ಳಿ: ಭಾರತ ಶ್ರೀಮಂತ ಪರಂಪರೆ ಹೊಂದಿದೆ. ಆಯಾ ಧಾರ್ಮಿಕ ಪದ್ಧತಿಯಂತೆ ಪ್ರತಿಯೊಬ್ಬರೂ ದಶಧರ್ಮದ ಸೂತ್ರಗಳಂತೆ ಧರ್ಮಾ ಚಾರದ ಆಶಯ ಪಾಲಿಸುವ ಮೂಲಕ ಜೀವನ ಪಾವನ ಗೊಳಿಸಿಕೊಳ್ಳಬೇಕು ಎಂದು ಉಜ್ಜಿನಿ ಸದ್ಧರ್ಮ ಪೀಠದ ಜಗದ್ಗುರು ಸಿದ್ಧಲಿಂಗ ಶಿವಾಚಾರ್ಯರು ಹೇಳಿದರು.

ಬಯಲುತುಂಬರಗುದ್ದಿ ಗ್ರಾಮದಲ್ಲಿ ಗುರುವಾರ ಏರ್ಪಡಿಸಿದ್ದ ಉಜ್ಜಿನಿ ಶ್ರೀ ಚನ್ನವೃಷಭ ಶ್ರೀಗಳ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಆಶೀ ರ್ವಚನ ನೀಡಿದರು. ಮಾನವ ಜನ್ಮವೇ ದೊಡ್ಡದು. ಇಂತಹ ಮಹಾಜನ್ಮ ಪಡೆದ ಮಾನವರು ಸದಾ ಧರ್ಮ, ಸಮಾನತೆಗೆ ಆದ್ಯತೆ ನೀಡಿ ಸಮಾಜದ ಅಭಿವೃದ್ಧಿಗೆ ಶ್ರಮಿಸಬೇಕು. ಗುರುವಿನ ಅನುಗ್ರಹವಿದ್ದರೆ ಎಲ್ಲವನ್ನೂ ಸಾಧಿಸಬಹುದು. ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವ ಮೂಲಕ ಸಂಸ್ಕಾರವಂತರನ್ನಾಗಿ ಮಾಡುವ ಜವಾಬ್ದಾರಿ ಪಾಲಕರ ಮೇಲಿದೆ ಎಂದರು.

ಉಜ್ಜಿನಿ ಸದ್ಧರ್ಮ ಪೀಠಕ್ಕೆ 107ನೇ ಜಗದ್ಗುರುಗಳನ್ನು ಕೊಟ್ಟ ಹಿರಿಮೆ ಬಯಲುತುಂಬರಗುದ್ದಿ ಗ್ರಾಮಕ್ಕಿದೆ. ಚನ್ನವೃಷಭ ಶ್ರೀಗಳಂತಹ ಮಹಾ ತಪಸ್ವಿಗಳ ಅನುಗ್ರಹ ಗ್ರಾಮಕ್ಕಿದೆ. ಶ್ರೀ ಪೀಠದಲ್ಲಿ ವಿಶೇಷ ಸ್ಥಾನವಿದೆ ಎಂದರು. ಪ್ರಮುಖರಾದ ಎಚ್.ಎಂ. ವೀರಭದ್ರಯ್ಯ, ಜಿ.ಬಸವರಾಜ್, ಪಿ.ವಿ. ರುದ್ರೇಶ್, ಎಂ.ಬಸವರಾಜ್, ಪಿ ವೀರೇಶ್, ಮೂಗಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net