ಸಮಾಜದ ಒಳಿತಿಗಾಗಿ ಶ್ರಮಿಸಿ

KHH-3P
ಕಾನಹೊಸಹಳ್ಳಿ ಸಮೀಪದ ಗೆದ್ದಲಗಟ್ಟೆ ಗ್ರಾಮದಲ್ಲಿ ಮರುಳಸಿದ್ದೇಶ್ವರ ದೇವಾಲಯ ಉದ್ಘಾಟನೆ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಧರ್ಮಸಭೆಯಲ್ಲಿ ಉಜ್ಜಿನಿ ಪೀಠದ ಜಗದ್ಗುರು ಸಿದ್ಧಲಿಂಗ ರಾಜದೇಶೀಕೇಂದ್ರ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿದರು. ಪ್ರಮುಖರಾದ ಡಿ.ಮರುಳಸಿದ್ದಪ್ಪ, ಎನ್.ನಾಗರಾಜ್, ಎನ್.ಸಿ.ಬಸಣ್ಣ, ಚನ್ನಮಲ್ಲಪ್ಪ, ಮುಖ್ಯಶಿಕ್ಷಕ ಜಿ.ಬಸೇಟಪ್ಪ, ಆರ್,ಲೋಕೇಶ್, ಎನ್.ಚಂದ್ರಪ್ಪ, ಸಿದ್ದನಗೌಡ, ಗಿಡ್ಡಯ್ಯ, ನಾಗರಾಜಸ್ವಾಮಿ, ನಾಗಲಿಂಗಸ್ವಾಮಿ ಇದ್ದರು.
Published on

ಕಾನಹೊಸಹಳ್ಳಿ: ಸತ್ಕಾರ್ಯ ಮಾಡುವರಿಗೆ ಪುಣ್ಯಪ್ರಾಪ್ತಿಯಾಗುತ್ತದೆ. ಸರ್ವಜನರ ಶ್ರೆಯೋಭಿವೃದ್ದಿಗೆ ಸಮಾಜಮುಖಿಯಾಗಿ ಶ್ರಮಿಸಿದಾಗ ಶಿವ ಮೆಚ್ಚುತ್ತಾನೆ ಎಂಬುದನ್ನು ಅರಿಯಬೇಕಿದೆ ಎಂದು ಉಜ್ಜಿನಿ ಸದ್ಧರ್ಮ ಪೀಠದ ಜಗದ್ಗುರು ಶ್ರೀ ಸಿದ್ಧಲಿಂಗ ರಾಜದೇಶೀಕೇಂದ್ರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.

ಗೆದ್ದಲಗಟ್ಟೆ ಗ್ರಾಮದಲ್ಲಿ ಶ್ರೀ ಮರುಳಸಿದ್ದೇಶ್ವರ ದೇವಾಲಯ ಉದ್ಘಾಟಿಸಿ ಧರ್ಮಸಭೆಯಲ್ಲಿ ಇತ್ತೀಚಿಗೆ ಮಾತನಾಡಿದರು. ಧಾರ್ಮಿಕ ಆಚರಣೆ, ಪರಂಪರೆ ಸನಾತನ ಕಾಲದಿಂದಲೂ ಇದ್ದು, ಅದನ್ನು ಪಾಲಿಸುವುದರಿಂದ ಮನಸ್ಸಿಗೆ ನೆಮ್ಮದಿ ಲಭಿಸಲಿದೆ. ಸಮಾಜದ ಒಳಿತಿಗಾಗಿ ಎಲ್ಲರೂ ಶ್ರಮಿಸಬೇಕು ಎಂದು ಸಲಹೆ ನೀಡಿದರು.

ಮಕ್ಕಳಿಗೆ ಉತ್ತಮ ಶಿಕ್ಷಣ ಮತ್ತು ಸಂಸ್ಕಾರವನ್ನು ಕಲಿಸುವುದರೊಂದಿಗೆ ಸತ್ಪ್ರಜೆಗಳನ್ನಾಗಿ ರೂಪಿಸುವ ಹೊಣೆಗಾರಿಕೆ ಪ್ರತಿಯೊಬ್ಬ ತಂದೆ-ತಾಯಿ ಮೇಲಿದೆ. ನಾಡಿನ ಮಠ-ಮಾನ್ಯಗಳು ಗುರುಶಿಷ್ಯ ಪರಂಪರೆಯಿಂದಾಗಿ ಪುರಾತನ ಕಾಲದಿಂದಲೂ ಶಿಕ್ಷಣ ಸಂಸ್ಥೆಗಳನ್ನು ಕಟ್ಟಿ ಉಚಿತ ಶಿಕ್ಷಣ ನೀಡುತ್ತಾ ಬಂದಿವೆ.

ಕಾಶಿಯಿಂದ ತಂದಿರುವ ಲಿಂಗ, ನಂದಿಮೂರ್ತಿ ಹಾಗೂ ವಿಘ್ನೇಶ್ವರ ಮತ್ತು ಪಂಚ ಕಳಶಾರೋಹಣ ಮಾಡಿದ ಪುಣ್ಯದ ಕೆಲಸ ಈ ಗ್ರಾಮಸ್ಥರದಾಗಿದೆ ಎಂದರು.

ಹಳ್ಳಿಗಳು ಸಾಂಸ್ಕೃತಿಕ ಪರಂಪರೆಯ ತಾಣಗಳಾಗಿವೆ. ಆದರೆ, ಅಧುನಿಕ ಭರಾಟೆಯಿಂದ ತನ್ನ ನೆಲೆ, ಪರಂಪರೆಯಿಂದ ಜನರು ವಿಮುಖವಾಗುತ್ತಿರುವುದು ಬೇಸರದ ಸಂಗತಿ.

ಹೆತ್ತವರನ್ನು ಹಾರೈಕೆ ಮಾಡುವುದು ಮಕ್ಕಳ ಜವಾಬ್ದಾರಿಯಾಗಿದೆ ಎಂದು ಉಜ್ಜಿನಿ ಜಗದ್ಗುರುಗಳು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net