ನಿರ್ಮಲಾ ಹತ್ಯೆಗೈದವನ ಪಾಲಕರ ಬಂಧನ

31072022 Khanahossalli arrest
Published on

ಕಾನಹೊಸಹಳ್ಳಿ: ಅವಳಿ ಜಿಲ್ಲೆಯ ಜನತೆಯನ್ನು ಬೆಚ್ಚಿಬಿಳಿಸಿದ್ದ ಇಲ್ಲಿನ ಕನ್ನಿಬೋರಯ್ಯನಹಟ್ಟಿ ಗ್ರಾಮದ ನರ್ಸಿಂಗ್ ವಿದ್ಯಾರ್ಥಿನಿ ನಿರ್ಮಲಾ ಹತ್ಯೆಯ ಪ್ರಮುಖ ಆರೋಪಿಯಾಗಿದ್ದ ಭೋಜರಾಜ್‌ನ ಪಾಲಕರನ್ನು ಪೊಲೀಸರು ಶನಿವಾರ ರಾತ್ರಿ ಬಂಧಿಸಿದ್ದಾರೆ.

ಯುವತಿಯನ್ನು ಹತ್ಯೆಗೈಯ್ಯಲು ಮಗನಿಗೆ ಸಹಕರಿಸಿದ್ದನೆಂದು ತಂದೆ ಬಸಣ್ಣ ಹಾಗೂ ಪುತ್ರನಿಗೆ ಬಾಲ್ಯವಿವಾಹ ಮದುವೆ ಮಾಡಿಸಿಲು ಸಹಕರಿಸಿದ್ದರು ಎಂಬ ಆರೋಪದ ಮೇಲೆ ಭೋಜರಾಜ್‌ನ ತಾಯಿ ಕರಿಬಸಮ್ಮನನ್ನು ಕಾನಹೊಸಹಳ್ಳಿ ಪೊಲೀಸರು ಬಂಧಿಸಿದ್ದಾರೆ.

ಈ ಇಬ್ಬರು ನರ್ಸಿಂಗ್ ವಿದ್ಯಾರ್ಥಿನಿ ನಿರ್ಮಲಾ ಹತ್ಯೆ ಬಳಿಕ ಗ್ರಾಮತೊರೆದು ತಲೆಮರಿಸಿಕೊಂಡಿದ್ದರು. ಕಾನೂನು ಬಾಹಿರವಾಗಿ ಭೋಜರಾಜ್‌ಗೆ ಬಾಲ್ಯವಿವಾಹ ಮಾಡಿದ್ದರಿಂದ ಆತನ ತಂದೆ, ತಾಯಿ ಹಾಗೂ ಮೈದುನ ಸೇರಿ ಮೂವರ ಮೇಲೆ ಪತ್ನಿಯೂ ಆದ ಅಪ್ರಾಪ್ತೆ ನೀಡಿದ ದೂರಿನಂತೆ ಪೋಕ್ಸೋ ಅನ್ವಯ ಪ್ರಕರಣ ದಾಖಲಾಗಿತ್ತು. ಕನ್ನಿಬೋರಯ್ಯನಹಟ್ಟಿಗೆ ತೆರಳಿ ತಾಲೂಕಿನ ನೂರಾರು ವಾಲ್ಮೀಕಿ ಸಮುದಾಯ ಮತ್ತು ಬಿಜೆಪಿ ಮುಖಂಡರು ಸೇರಿ ಯುವತಿ ಕುಟುಂಬಕ್ಕೆ ಸಾಂತ್ವನ ಹೇಳಿ ನಂತರ ಆರೋಪಿಗಳ ಪತ್ತೆಗಾಗಿ ಆಗ್ರಹಿಸಿದ್ದರು.

ಆರೋಪಿಗಳ ಪತ್ತೆಗಾಗಿ ತನಿಖೆ ಕೈಗೊಂಡಿದ್ದ ಪೊಲೀಸರು ಆಂಧ್ರಪ್ರದೇಶ ಡಿ.ಹಿರೇಹಾಳ್ ಗ್ರಾಮದ ಹೊರವಲಯದಲ್ಲಿ ಇರುವ ಬಗ್ಗೆ ಮಾಹಿತಿ ಆಧಾರಿಸಿ ಬಲೆ ಬೀಸಿದಾಗ ಆರೋಪಿಗಳ ಸಿಕ್ಕಿಬಿದ್ದಿದ್ದಾರೆ. ಬಂಧಿತರನ್ನು ಭಾನುವಾರ ಬೆಳಗ್ಗೆ ಕಾನಹೊಸಹಳ್ಳಿ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net