ಗ್ರಾಮೀಣರಿಗೆ ವಲಯಮಟ್ಟದ ಕ್ರೀಡಾಕೂಟ ಸಹಕಾರಿ

Kanahosahalli Sports
ಮಾರಮ್ಮನಹಳ್ಳಿಯಲ್ಲಿ ಶುಕ್ರವಾರ ಚಿರತುಗುಂಡು ವಲಯ ಮಟ್ಟದ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟಕ್ಕೆ ಗ್ರಾಪಂ ಅಧ್ಯಕ್ಷೆ ನವಲಮ್ಮ ಚಾಲನೆ ನೀಡಿದರು. ಗ್ರಾಪಂ ಸದಸ್ಯರಾದ ನೇತ್ರಮ್ಮ, ನಾಗರಾಜ, ಓಬಣ್ಣ , ಹೇಮಾವತಿ, ಪಿಡಿಒ ಸಿ.ರಾಮಕೃಷ್ಣ, ಶಿಕ್ಷಕ ವಿಶ್ವನಾಥ ಇತರರಿದ್ದರು.
Published on

ಕಾನಹೊಸಹಳ್ಳಿ: ವಲಯ ಮಟ್ಟದ ಕ್ರೀಡಾಕೂಟ ಆಯೋಜನೆಯಿಂದ ಗ್ರಾಮೀಣ ಭಾಗದ ಪ್ರತಿಭೆಗಳನ್ನು ಗುರುತಿಸಲು ಅನುಕೂಲವಾಗಲಿದೆ ಎಂದು ಗಂಡಬೊಮ್ಮನಹಳ್ಳಿ ಗ್ರಾಪಂ ಅಧ್ಯಕ್ಷೆ ನವಲಮ್ಮ ತಿಳಿಸಿದರು.

ಮಾರಮ್ಮನಹಳ್ಳಿಯಲ್ಲಿ ಚಿರತುಗುಂಡು ವಲಯ ಮಟ್ಟದ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು.

ಕ್ರೀಡಾಕೂಟದಿಂದ ಹಳ್ಳಿ ಜನರಲ್ಲಿ ಕ್ರೀಡಾ ಮನೋಭಾವ ಹೆಚ್ಚಿಸಲು ಅವಕಾಶ ಕಲ್ಪಿಸಿದಂತಾಗುತ್ತದೆ. ಕ್ರೀಡೆಯಲ್ಲಿ ಸೋಲು-ಗೆಲುವು ಸಾಮಾನ್ಯವಾಗಿದ್ದು, ಸಮಾನವಾಗಿ ಸ್ವೀಕರಿಸಬೇಕು ಎಂದು. ಸಿಆರ್‌ಪಿ ರಂಗಪ್ಪ ಮಾತನಾಡಿ, ಪಠ್ಯದೊಂದಿಗೆ ಶಿಕ್ಷಕರು ಮಕ್ಕಳಲ್ಲಿ ಕ್ರೀಡಾ ಮನೋಭಾವ ಬೆಳಸಬೇಕು ಎಂದರು.

ಪಿಡಿಒ ರಾಮಕೃಷ್ಣ, ಗ್ರಾಪಂ ಸದಸ್ಯರಾದ ಸಿದ್ದಪ್ಪ, ಹೇಮಾವತಿ, ಇಂದ್ರಮ್ಮ, ನೇತ್ರಮ್ಮ ಓಬಮ್ಮ, ನಾಗರಾಜ್, ರತ್ನಮ್ಮ, ಓಬಣ್ಣ, ಮಾರಮ್ಮನಹಳ್ಳಿ ಶಾಲೆ ಮುಖ್ಯಶಿಕ್ಷಕ ವಿಶ್ವನಾಥ, ತಿಪ್ಪೇಸ್ವಾಮಿ, ವಿಜಯಕುಮಾರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net