ಗ್ರಾಮೀಣ ಜನರ ಆರೋಗ್ಯ ರಕ್ಷಣೆಗೆ ಒತ್ತು

Kh Halli Health Camp
ಹುಡೇಂ ಗ್ರಾಮದ ಪಿಎಚ್‌ಸಿಯಲ್ಲಿ ಬುಧವಾರ ಶಿಬಿರದಲ್ಲಿ ಜನರ ಕಣ್ಣುಗಳ ತಪಾಸಣೆ ಮಾಡುತ್ತಿರುವ ವೈದ್ಯರು.
Published on

ಕಾನಹೊಸಹಳ್ಳಿ: ಮೂಲಸೌಕರ್ಯ ಕೊರತೆಗಳ ನಡುವೆ ಜೀವನ ನಡೆಸುವ ಗ್ರಾಮೀಣ ಜನರ ಆರೋಗ್ಯ ಸುರಕ್ಷತೆಗೆ ಹೆಚ್ಚು ಒತ್ತು ನೀಡಬೇಕೆಂದು ಡಾ.ಶಹಬಾಜ್ ತಿಳಿಸಿದರು.

ಹುಡೇಂ ಗ್ರಾಮದಲ್ಲಿ ಬುಧವಾರ ಜಿಲ್ಲಾ ಅಂಧತ್ವ ನಿವಾರಣಾ ಸಂಸ್ಥೆ, ಶಿವಮೊಗ್ಗ ಶಂಕರ ಕಣ್ಣಿನ ಆಸ್ಪತ್ರೆ, ತಾಲೂಕು ಆರೋಗ್ಯ ಇಲಾಖೆ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರದ ಸಹಯೋಗದಲ್ಲಿ ಕಣ್ಣಿನ ಉಚಿತ ತಪಾಸಣೆ ಶಿಬಿರದಲ್ಲಿ ಮಾತನಾಡಿದರು.

ಶಿಬಿರದಲ್ಲಿ ವೈದ್ಯರು 171 ಜನರ ತಪಾಸಣೆ ಮಾಡಿದರು.ಕಣ್ಣಿನ ದೃಷ್ಟಿ ದೋಷಯುಳ್ಳವರಿಗೆ ಶಸ್ತ್ರಚಿಕಿತ್ಸೆಗೆ ಶಿಫಾರಸು ಮಾಡಲಾಯಿತು. ಡಾ.ವಿಶ್ವಾಸ್, ಕೂಡ್ಲಿಗಿ ಆರೋಗ್ಯ ಇಲಾಖೆ ನೇತ್ರಾಧಿಕಾರಿ ರಮ್ಯಾ, ಶಂಕರ ಕಣ್ಣಿನ ಆಸ್ಪತ್ರೆಯ ಕೋ-ಆರ್ಡಿನೇಟರ್ ಶಿವಪ್ರಸಾದ್, ಸಿಬ್ಬಂದಿ ಶಂಕರನಾಯ್ಕ, ಕೃಷ್ಣ, ಶ್ರುತಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net