

ಕಾನಹೊಸಹಳ್ಳಿ: ಪ್ರಸ್ತಾವನೆ ಹಂತದಲ್ಲಿರುವ ಮೋಟಾರ್ ವಾಹನ ಕಾಯ್ದೆ ವಿರೋಧಿಸಿ ಆಟೋ, ಕಾರು ಮತ್ತು ಲಾರಿ ಚಾಲಕ, ಮಾಲೀಕರ ಯೂನಿಯನ್‌ನಿಂದ ಪಟ್ಟಣದಲ್ಲಿ ಶನಿವಾರ ಪ್ರತಿಭಟನೆ ನಡೆಸಲಾಯಿತು.
ಕೇಂದ್ರ ಸರ್ಕಾರದ ಪ್ರಸ್ತಾವಿತ ಕಾಯ್ದೆಯಲ್ಲಿ 10 ವರ್ಷ ಜೈಲು ಹಾಗೂ 7 ಲಕ್ಷ ರೂ. ದಂಡ ಚಾಲಕರಿಗೆ ನುಂಗಲಾಗದ ತುತ್ತಾಗಲಿದೆ. ಚಾಲಕರು ಜೀವನ ನಿರ್ವಹಣೆ ಕಷ್ಟಕರವಾಗಲಿದೆ. ಅಲ್ಲದೆ ಬೀದಿಗೆ ಬೀಳುವ ಸ್ಥಿತಿ ಬರಬಹುದು. ಕಾಯ್ದೆಯನ್ನು ಅನುಷ್ಠಾನ ಮಾಡದೆ ಚಾಲಕರ ಹಿತ ಕಾಯಬೇಕಿದೆ ಎಂದು ಯೂನಿಯನ್ ಕಾನಹೊಸಹಳ್ಳಿ ಘಟಕದ ಅಧ್ಯಕ್ಷ ಕೆ.ಎಸ್.ವಿಶ್ವನಾಥ ಆಗ್ರಹಿಸಿದರು. ನಾಡಕಚೇರಿಯ ಕಂದಾಯ ನಿರೀಕ್ಷಕ ಮುರಳಿ ಕೃಷ್ಣಗೆ ಮನವಿ ಸಲ್ಲಿಸಿದರು.