ನಾಯಿ ದಾಳಿಗೆ 5 ಕುರಿ ಮರಿಗಳು ಬಲಿ

Published on

ಕಾನಹೊಸಹಳ್ಳಿ: ಸಮೀಪದ ಪೂಜಾರಹಳ್ಳಿ ಐದು ಕುರಿಮರಿಗಳ ಮೇಲೆ ನಾಯಿಗಳು ದಾಳಿ ನಡೆಸಿ ಕಿತ್ತು ತಿಂದಿವೆ. ಗ್ರಾಮದ ಉಪ್ಪಾರ ಅಂಜಿನಪ್ಪ ಅವರ ಟಗರು ಮರಿಗಳು ಸತ್ತಿವೆ. ಒಂದು ಕುರಿ ಗಾಯಗೊಂಡಿದೆ. ಕಳೆದ 4-5 ತಿಂಗಳಿಂದ ಟಗರುಮರಿಗಳನ್ನು ಸಾಕಣೆ ಮಾಡಿದ್ದ ಅಂಜಿನಪ್ಪ ಅವರು ಮನೆಯ ಪಕ್ಕದ ಮೊಬೈಲ್ ಟವರ್ ಸ್ಥಳದ ಕಾಂಪೌಂಡ್ ಬಳಿ ಕಟ್ಟಿ ಹಾಕಿದ್ದರು. ಬೆಳಗ್ಗೆ ಎದ್ದು ನೋಡಿದಾಗ ಘಟನೆ ನಡೆದಿರುವುದು ಗೊತ್ತಾಗಿದೆ. ಘಟನಾ ಸ್ಥಳಕ್ಕೆ ಪಶು ಆಸ್ಪತ್ರೆ ವೈದ್ಯರು ಭೇಟಿ ನೀಡಿ ಪರಿಶೀಲಿಸಿದ್ದು, ನಾಯಿಗಳು ದಾಳಿಯಿಂದ ಮರಿಗಳು ಸತ್ತಿರುವ ಸಾಧ್ಯತೆಯಿದೆ ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net