

ಕಾನಹೊಸಹಳ್ಳಿ: ಗ್ರಾಮೀಣ ಬಡ ಮಹಿಳೆಯರಿಗೆ ಸ್ವಯಂ ಉದ್ಯೋಗ ಕಲ್ಪಿಸುವ ಉದ್ದೇಶದಿಂದ ಪಶುಪಾಲನಾ ಇಲಾಖೆಯಿಂದ ಉಚಿತವಾಗಿ ಕೋಳಿ ಮರಿಗಳನ್ನು ವಿತರಿಸಿ ಸ್ವಾವಲಂಬಿ ಜೀವನ ಮಾಡಲು ಉತ್ತೇಜನ ನೀಡಲಾಗುತ್ತಿದೆ ಎಂದು ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ತಿಳಿಸಿದರು.
ಸಮೀಪದ ನರಸಿಂಹನಗಿರಿ ಗ್ರಾಮದಲ್ಲಿ ಶುಕ್ರವಾರ ಪಶುಪಾಲನಾ ಇಲಾಖೆಯಿಂದ 20 ಜನ ರೈತ ಮಹಿಳೆಯರಿಗೆ ಉಚಿತವಾಗಿ ಕೋಳಿ ಮರಿಗಳನ್ನು ವಿತರಿಸಿ ಮಾತನಾಡಿದರು. ಮಹಿಳೆಯರಿಗೆ ಹೈನುಗಾರಿಕೆ ಕ್ಷೇತ್ರದಲ್ಲಿ ಉತ್ತೇಜನ ನೀಡುವುದು ಮಾತ್ರವಲ್ಲ, ಅವರನ್ನು ಸ್ವಾವಲಂಬಿಯಾಗಿಸಿ ಮುಂಚೂಣಿಗೆ ತರಬೇಕು ಮತ್ತು ಕೃಷಿ ಜತೆಗೆ ಉಪ ಕಸುಬಿಗೆ ಪೂರಕವಾದ ಯೋಜನೆ ಮೂಲಕ ಉಚಿತವಾಗಿ ಕೋಳಿ ಮರಿಗಳನ್ನು ವಿತರಿಸಿದರೆ ಅವುಗಳನ್ನು ಸಾಕಣೆ ಮಾಡಿ, ಆರ್ಥಿಕವಾಗಿ ಸದೃಢರಾಗಲು ಸಹಾಯವಾಗಲಿದೆ ಎಂದು ತಿಳಿಸಿದರು.