ಬಾಗಿನ ಅರ್ಪಣೆ ಹಬ್ಬದಂತೆ ಮಾಡೋಣ

11092022 kanahossahalli news
Published on

ಕಾನಹೊಸಹಳ್ಳಿ: ಕ್ಷೇತ್ರದಲ್ಲಿ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಕಾಮಗಾರಿ ತ್ವರಿತಗತಿಯಲ್ಲಿ ಸಾಗಿದೆ. ಮುಂಬರುವ ದಿನಗಳಲ್ಲಿ ಕೆರೆಗಳು ಭರ್ತಿಯಾಗಲಿವೆ ಎಂದು ಶಾಸಕ ಎನ್.ವೈ.ಗೋಪಾಲಕೃಷ್ಣ ತಿಳಿಸಿದರು.

ಚಂದ್ರಶೇಖರಪುರದಲ್ಲಿ ಶುಕ್ರವಾರ 3.55 ಕೋಟಿ ರೂ. ವೆಚ್ಚದ ರಸ್ತೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ಮೂರು ವಾರಗಳಿಂದ ನಿರಂತರ ಮಳೆ ಬರುತ್ತಿದೆ. ಕೆರೆಗಳಲ್ಲಿ ನೀರು ಸಂಗ್ರಹವಾಗುತ್ತಿದೆ. ರಾಮದುರ್ಗ, ಗುಡೇಕೋಟೆ ಕೆರೆಗಳು ತುಂಬಿರುವ ಕಾರಣ ಬಾಗಿನ ಅರ್ಪಣೆ ಮಾಡಲಾಗಿದೆ. ಜಿಲ್ಲೆಯ ಅತಿ ದೊಡ್ಡ ಗಂಡಬೊಮ್ಮನಹಳ್ಳಿ ಕೆರೆ ಭರ್ತಿಗೆ ನಾಲ್ಕು ಅಡಿ ಬಾಕಿಯಿದೆ. ಕೋಡಿ ಹರಿಯಲ್ಲಿ ಬಾಗಿನ ಕಾರ್ಯಕ್ರಮವನ್ನು ಹಬ್ಬದಂತೆ ಆಚರಿಸೋಣ ಎಂದರು.

ಪ್ರಮುಖರಾದ ಟಿ.ಜಿ.ಮಲ್ಲಿಕಾರ್ಜುನಗೌಡ, ಸೂರ್ಯಪಾಪಣ್ಣ, ವೀರನಗೌಡ, ಎಸ್.ಪಿ.ಪ್ರಕಾಶ್, ಬಿ.ಭೀಮೇಶ್, ಎಸ್.ದುರುಗೇಶ್, ಮಂಜುನಾಥ ನಾಯಕ, ಚಂದ್ರು, ಮುತ್ತೆಪಾಲಯ್ಯ, ದಿಬ್ಬದಹಳ್ಳಿ ಪಾಪಣ್ಣ, ಗುಡೇಕೋಟೆ ಬಷಿರ್, ಎಲ್.ಪವಿತ್ರಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net