ವಾಗ್ದಾನದಂತೆ ರಸ್ತೆ ಕಾಮಗಾರಿ

khanahossali road repair bhoomi puja
ಮಹದೇವಪುರದ ಎಸ್ಸಿ ಕಾಲನಿಯಲ್ಲಿ 96 ಲಕ್ಷ ರೂ. ವೆಚ್ಚದ ಸಿ.ಸಿ ರಸ್ತೆ ಹಾಗೂ ಚರಂಡಿ ನಿರ್ಮಾಣ ಕಾಮಗಾರಿಗೆ ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಭೂಮಿಪೂಜೆ ನೆರವೇರಿಸಿದರು. ಗ್ರಾಪಂ ಅಧ್ಯಕ್ಷ ಜಯಣ್ಣ, ಪ್ರಮುಖರಾದ ದಿನ್ನೆ ಮಲ್ಲಿಕಾರ್ಜುನ ಇತರರಿದ್ದರು.
Published on

ಕಾನಹೊಸಹಳ್ಳಿ: ಕ್ಷೇತ್ರದ ಗ್ರಾಮೀಣ ಭಾಗದ ಹಳ್ಳಿಗಳಲ್ಲಿ ಮೂಲ ಸೌಕರ್ಯ ಕಲ್ಪಿಸುವುದು ಹಾಗೂ ಎಲ್ಲ ಸಮುದಾಯದವರ ಸಮಸ್ಯೆಗಳಿಗೆ ಸ್ಪಂದಿಸುವುದಾಗಿ ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ತಿಳಿಸಿದರು.

ಗುಡೇಕೋಟೆ ಸಮೀಪದ ಮಹದೇವಪುರ ಗ್ರಾಮದ ಎಸ್ಸಿ ಕಾಲನಿಯಲ್ಲಿ ಲೋಕೋಪಯೋಗಿ ಇಲಾಖೆಯ 96 ಲಕ್ಷ ರೂ.ವೆಚ್ಚದ ಸಿ.ಸಿ ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿಗೆ ಗುರುವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ಗ್ರಾಮದಲ್ಲಿ ಈ ಹಿಂದೆ ಹೆಚ್ಚಿನ ಮಳೆಯಾಗಿ ಮನೆಗಳಿಗೆ ನೀರು ನುಗ್ಗಿದ್ದಾಗ ಭೇಟಿ ನೀಡಿ ಜನರ ಸಮಸ್ಯೆ ಅರಿತಿದ್ದೆ. ಎಸ್ಸಿ ಕಾಲನಿಯಲ್ಲಿ ಅಗತ್ಯ ಕಾಮಗಾರಿ ಕೈಗೊಳ್ಳಲು ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದೆ. ಜನರಿಗೆ ನೀಡಿದ ಮಾತಿನಂತೆ ಸಿ.ಸಿ ರಸ್ತೆ, ಚರಂಡಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದ್ದೇನೆ ಎಂದರು.

ಅಪ್ಪೇನಹಳ್ಳಿ ಗ್ರಾಪಂ ಅಧ್ಯಕ್ಷ ಕೆ.ಜಯಣ್ಣ, ಸದಸ್ಯರಾದ ಪಿ.ರಾಜಶೇಖರ, ಮೇಕೆ ಗೋವಿಂದ, ಗ್ರಾಪಂ ಮಾಜಿ ಅಧ್ಯಕ್ಷ ದಿನ್ನೆ ಮಲ್ಲಿಕಾರ್ಜುನ, ಪ್ರಮುಖರಾದ ಬೊಮ್ಮಣ್ಣ, ವೆಂಕಟೇಶ್, ಗುರುಸ್ವಾಮಿ, ಚಿದಾನಂದಪ್ಪ, ಪೂಜಾರ್ ಬಸಣ್ಣ, ಓಬಣ್ಣ, ಈರಮ್ಮ, ಲಕ್ಷ್ಮೀದೇವಿ, ಹನುಮಕ್ಕ, ಕಾಡಮ್ಮ ಇತರರಿದ್ದರು.

ಮಹದೇವಪುರದ ಎಸ್ಸಿ ಕಾಲನಿಯಲ್ಲಿ 96 ಲಕ್ಷ ರೂ. ವೆಚ್ಚದ ಸಿ.ಸಿ ರಸ್ತೆ ಹಾಗೂ ಚರಂಡಿ ನಿರ್ಮಾಣ ಕಾಮಗಾರಿಗೆ ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಭೂಮಿಪೂಜೆ ನೆರವೇರಿಸಿದರು. ಗ್ರಾಪಂ ಅಧ್ಯಕ್ಷ ಜಯಣ್ಣ, ಪ್ರಮುಖರಾದ ದಿನ್ನೆ ಮಲ್ಲಿಕಾರ್ಜುನಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net