ಗಾಂಜಾ ಬೆಳೆದು ಸಿಕ್ಕಿಬಿದ್ದ ಆರೋಪಿ ಪಂಚನಾಮೆ ವೇಳೆ ಪರಾರಿ: ಎರಡು ದಿನ ಪೊಲೀಸರ ಶೋಧಕಾರ್ಯ ವೇಳೆ ಸಿಕ್ಕ

arrest
Published on

ಕಾನಹೊಸಹಳ್ಳಿ: ಪಂಚನಾಮೆ ವೇಳೆ ಪರಾರಿಯಾಗಿದ್ದ ಆರೋಪಿ ಕವಾಲಿ ಪಾಪಣ್ಣ ಶುಕ್ರವಾರ ಗುಡೇಕೋಟೆ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಗುಡೇಕೋಟೆ ಠಾಣಾ ವ್ಯಾಪ್ತಿಯ ಸಂಡೂರು ತಾಲೂಕಿ ಮಾರ್ತಜನಹಳ್ಳಿ ಗ್ರಾಮದಲ್ಲಿ ಮನೆಯ ಪಕ್ಕದ ಖಾಲಿ ಜಾಗದಲ್ಲಿ ಗಾಂಜಾ ಬೆಳೆಸಿದ್ದರಿಂದ ಬುಧವಾರ ಪೊಲೀಸರು ಬಂಧಿಸಿದ್ದರು. 16 ಕೆಜಿ ಗಾಂಜಾ ಜಪ್ತಿ ಮಾಡಿದ್ದರು.

ಬಳಿಕ ಸ್ಥಳ ಪಂಚನಾಮೆ ವೇಳೆ ಪಾಪಣ್ಣ ತಪ್ಪಿಸಿಕೊಂಡಿದ್ದ. ಶೋಧ ಕಾರ್ಯ ನಡೆಸಿದ ಗುಡೇಕೋಟೆ ಪೊಲೀಸರು ಶುಕ್ರವಾರ ಕರಡಿಹಳ್ಳಿ ಗ್ರಾಮದಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಪಿಎಸ್‌ಐ ಕೆ.ರಾಮಪ್ಪ, ಎಎಸ್‌ಐ ರವಿಕುಮಾರ್, ಪೇದೆಗಳಾದ ಎಂ.ಎಂ.ಸ್ವಾಮಿ, ಚಂದ್ರಮೌಳಿ, ಶಶಿಧರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net