ಸರ್ವತೋಮುಖ ಅಭಿವೃದ್ಧಿಗೆ ಆದ್ಯತೆ

khh-1
ಕಾನಹೊಸಹಳ್ಳಿ ಸಮೀಪದ ಹಾರಕಬಾವಿ ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ಉಪಕೇಂದ್ರ ಕಟ್ಟಡ ನಿರ್ಮಾಣಕ್ಕೆ ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಭೂಮಿಪೂಜೆ ನೆರವೇರಿಸಿದರು.ಗ್ರಾಪಂ ಅಧ್ಯಕ್ಷ ಜಿ.ಕೋಟಿಲಿಂಗನಗೌಡ, ತಾಲೂಕು ಆರೋಗ್ಯಾಧಿಕಾರಿ ಎಸ್.ಪಿ.ಪ್ರದೀಪ್, ಪ್ರಮುಖರಾದ ಎಸ್.ಶೇಖರಪ್ಪ, ಡಾ.ಸಿ.ಮಹಾಲಿಂಗಪ್ಪ, ಎಸ್.ಜಾತಪ್ಪ ಇತರರಿದ್ದರು.
Published on

ಕಾನಹೊಸಹಳ್ಳಿ: ಅತ್ಯಂತ ಹಿಂದುಳಿದ ಕ್ಷೇತ್ರದಲ್ಲಿ ಆರೋಗ್ಯ, ಶಿಕ್ಷಣ ಸೇರಿ ವಿವಿಧತೆಯಲ್ಲಿ ಸುಧಾರಣೆ ತರುವುದರ ಜತೆಗೆ ಪ್ರತಿ ಹಳ್ಳಿಯ ಸರ್ವತೋಮುಖ ಅಭಿವೃದ್ಧಿಯೇ ಧ್ಯೇಯವಾಗಿದೆ ಎಂದು ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಹೇಳಿದರು.

ಸಮೀಪದ ಹಾರಕಬಾವಿ ಗ್ರಾಮದಲ್ಲಿ 50 ಲಕ್ಷ ರೂ.ವೆಚ್ಚದ ಪ್ರಾಥಮಿಕ ಆರೋಗ್ಯ ಕೇಂದ್ರದ ಉಪಕೇಂದ್ರ ಕಟ್ಟಡ ನಿರ್ಮಾಣಕ್ಕೆ ಶುಕ್ರವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

ಬಡತನ ಹೆಚ್ಚಿರುವ ಕ್ಷೇತ್ರದಲ್ಲಿ ಅಭಿವೃದ್ಧಿ ಹಾಗೂ ಜನಜೀವನ ಉತ್ತಮ ಪಡಿಸುವುದಕ್ಕಾಗಿ ರಾಜ್ಯದ ಕಾಂಗ್ರೆಸ್ ಸರ್ಕಾರ ಹೆಚ್ಚಿನ ಅನುದಾನ ನೀಡಿದೆ. ಅಲ್ಲದೆ, ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಹಾಗೂ ಜಿಲ್ಲಾ ಖನಿಜ ಪ್ರತಿಷ್ಠಾನದಿಂದ ಬರುವ ಅನುದಾನವನ್ನು ಆಸ್ಪತ್ರೆಗಳ ಉನ್ನತೀಕರಣ, ಸರ್ಕಾರಿ ಶಾಲೆಗಳ ಹೊಸ ಕೊಠಡಿಗಳ ನಿರ್ಮಾಣ, ಮೂಲಸೌಕರ್ಯ ಒದಗಿಸುವುದು, ಸ್ಮಾರ್ಟ್ ಕ್ಲಾಸ್, ಗ್ರಾಮಗಳಲ್ಲಿ ಸಿಸಿ ರಸ್ತೆ, ಚರಂಡಿ ಹಾಗೂ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗಿದ್ದು, ಇನ್ನೂ ಹೆಚ್ಚಿನ ಅನುದಾನ ತಂದು ಮಾದರಿ ಕ್ಷೇತ್ರವವನ್ನಾಗಿಸುವ ಗುರಿ ಹೊಂದಲಾಗಿದೆ ಎಂದರು.

ಸಿದ್ದಾಪುರ ಗೊಲ್ಲರಹಟ್ಟಿಯಲ್ಲಿ 20ಲಕ್ಷ ರೂ.ವೆಚ್ಚದ ಅಂಗನವಾಡಿ ಕೇಂದ್ರ ಕಟ್ಟಡ ನಿರ್ಮಾಣ, ಸಿದ್ದಾಪುರದಲ್ಲಿ 21ಲಕ್ಷ ರೂ.ವೆಚ್ಚದಲ್ಲಿ ನಿರ್ಮಾಣಗೊಂಡ ಶಾಲಾ ಕೊಠಡಿಗಳ ಉದ್ಘಾಟನೆಯನ್ನು ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ನೆರವೇರಿಸಿದರು. ವಿಜಯನಗರ ಜಿಲ್ಲೆಯಲ್ಲೇ ದೊಡ್ಡ ಕೆರೆಯಾದ ಗಂಡಬೊಮ್ಮನಹಳ್ಳಿ ಕೆರೆ ಏರಿ ಪಿಚ್ಚಿಂಗ್ ಕಾಮಗಾರಿ ಪೂರ್ಣಗೊಂಡಿರುವುದನ್ನು ವೀಕ್ಷಿಸಿದರು.

ಗ್ರಾಪಂ ಅಧ್ಯಕ್ಷ ಜಿ.ಕೋಟಿಲಿಂಗನಗೌಡ, ಉಪಾಧ್ಯಕ್ಷೆ ಪಿ.ರತ್ನಮ್ಮ, ಪಿಡಿಒ ಜಿ.ವೀರಣ್ಣ, ತಾಲೂಕು ಆರೋಗ್ಯಾಧಿಕಾರಿ ಎಸ್.ಪಿ.ಪ್ರದೀಪ್, ಡಾ.ಸುರೇಶ್, ಪ್ರಮುಖರಾದ ಎಸ್.ಶೇಖರಪ್ಪ, ಡಾ.ಸಿ.ಮಹಾಲಿಂಗಪ್ಪ, ಎಸ್.ಜಾತಪ್ಪ, ಬುಡ್ನಳ್ಳಿ ಈಶಣ್ಣ, ಎಚ್.ಕೋಟೇಶ್, ಹಾದಿಮನಿ ಸಿದ್ಲಿಂಗಪ್ಪ, ದಾಸರೋಳ್ ಶೇಖರಪ್ಪ, ಶಾಂತಕುಮಾರ್, ಪೂಜಾರ್ ಉಮೇಶ್, ಬುಡ್ನಳ್ಳಿ ಮಹೇಶ್, ಬಾನಿ ಮೂಗಣ್ಣ, ಮೂಲೇರ ಚನ್ನಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net