

ಕಾನಹೊಸಹಳ್ಳಿ: ಗುಡೇಕೋಟೆಯಲ್ಲಿ ಬುಧವಾರ ತಡರಾತ್ರಿ ಸುರಿದ ಮಳೆಯಿಂದಾಗಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣ ಮತ್ತು ಹೆರಿಗೆ ವಾರ್ಡ್ ಮುಂದೆ ಮಳೆ ನೀರು ಸಂಗ್ರಹವಾಗಿದೆ. ಆಸ್ಪತ್ರೆ ಆವರಣದಿಂದ ಮಳೆ ನೀರು ಹೊರಗೆ ಹೋಗಲು ಸೂಕ್ತ ವ್ಯವಸ್ಥೆ ಇಲ್ಲದಿರುವುದು ಅವಾಂತರಕ್ಕೆ ಕಾರಣವಾಗಿದೆ.
ಮಳೆಯ ನೀರಿನ ಜತೆಗೆ ಆಸ್ಪತ್ರೆ ಛಾವಣಿಯಿಂದ ಬರುವ ನೀರು ಸಹ ಹೊರಗೆ ಹೋಗಲು ಸೂಕ್ತ ವ್ಯವಸ್ಥೆ ಇಲ್ಲ. ಹೀಗಾಗಿ ಸಮಸ್ಯೆಯಾಗುತ್ತಿದೆ. ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ಗಮನಕ್ಕೆ ತಂದರೂ ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯರು ದೂರಿದರು.
((ಕೋಟ್))) ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ಸುರಿದ ನೀರು ಹೊರಗೆ ಹರಿದು ಹೋಗಲು ಸೂಕ್ತ ವ್ಯವಸ್ಥೆ ಇಲ್ಲದಿರುವುದು ಸಮಸ್ಯೆಯಾಗಿದೆ. ಜೋರಾಗಿ ಮಳೆ ಬಂದಲ್ಲಿ ಇಂತಹ ಸಮಸ್ಯೆ ಆಗುತ್ತದೆ. ಶ್ರೀಧರಬಾಬು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ, ಗುಡೇಕೊಟೆ